ಬಂಟ್ವಾಳ: ಸುಮಾರು ಒಂದು ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸಾಲೆತ್ತೂರು-ಮಾರ್ನಬೈಲ್-ನಂದಾವರ ರಸ್ತೆಯನ್ನು ಶನಿವಾರ ಉದ್ಘಾಟಿಸಲಾಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಅಭಿವೃದ್ದಿಪಡಿಸಲಾದ ಈ ರಸ್ತೆ ಉದ್ಘಾಟಿಸಿ ಈ ಭಾಗದ ಅಭಿವೃದ್ಧಿ ಕಾರ್ಯವನ್ನು ಹಂತ,ಹಂತವಾಗಿ ಮಾಡಲಾಗುವುದು,ಸಾರ್ವಜನಿಕರು ಈ ರಸ್ತೆಯ ಸದುಪಯೋಗ ಪಡೆಯುವಂತೆ ಕೋರಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರವೀಂದ್ರ ಕಂಬಳಿ, ಶ್ರೀ ಕ್ಷೇತ್ರ ನಂದಾವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ ಭಂಡಾರಿ, ಬಿಜೆಪಿ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ, ಪ್ರವೀಣ್ ಗಟ್ಟಿ, ತನಿಯಪ್ಪ ಮಡಿವಾಳ, ರೂಪೇಶ್ ಆಚಾರ್ಯ, ಪಂಚಾಯತ್ ಸದ್ಯಸರಾದ ನವೀನ್ ಅಂಚನ್, ಸುಮತಿ ಎಸ್. ವನಜಾ. ಗಿರಿಜಾ, ದಯಾನಂದ ಬಿಎಂ, ಅಶೋಕ್ ಗಟ್ಟಿ, ಸೂರಜ್ ಶೆಟ್ಟಿ ಸಜೀಪ, ಗುರುಕಿರಣ್ ಆಳ್ವ, ವಿಶ್ವನಾಥ್ ಕೊಟ್ಟಾರಿ, ಇದಿನಪ್ಪ, ಇಸ್ಮಾಯಿಲ್ ಲೋಕೋಪಯೋಗಿ ಇಲಾಖೆಯ ಅಭಿಯಂತರ ಅರುಣ್ಪ್ರಕಾಶ್ ಉಪಸ್ಥಿತರಿದ್ದರು.