ನವದೆಹಲಿ : ಹಬ್ಬದ ದಿನಗಳಲ್ಲೇ ರೈಲ್ವೇ ಪ್ರಯಾಣಿಕರಿಗೆ ಕಹಿ ಸುದ್ದಿ. 80 ರೈಲುಗಳಲ್ಲಿ ಅರ್ಧದಷ್ಟು ತತ್ಕಾಲ್ ಟಿಕೆಟ್ ದರ ಏರಿಕೆಯಾಗಲಿದೆ. ಬೇಡಿಕೆ ಹೆಚ್ಚಾದಾಗ ದರ ಹೆಚ್ಚಾಗುವ ವ್ಯವಸ್ಥೆಯನ್ನು ಭಾಗಶಃ ಜಾರಿಗೆ ತರಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಅದರಂತೆ ಶೇ. 50ರಷ್ಟು ತತ್ಕಾಲ್ ಟಿಕೆಟ್’ಗಳನ್ನು ಹಾಲಿ ವ್ಯವಸ್ಥೆಯಂತೆ ಮಾರಾಟ ಮಾಡಿದರೆ, ಉಳಿದ ಶೇ. 50ನ್ನು ‘ಪ್ರೀಮಿಯಂ ತತ್ಕಾಲ್’ ಕೋಟಾದಡಿ ಪರಿಷ್ಕೃತ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 Untitled-1 copy

ಹಬ್ಬದ ಋತುವಾದ ಕಾರಣ ರೈಲ್ವೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಈ ವೇಳೆ ಆದಾಯವನ್ನೂ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ‘ಪ್ರೀಮಿಯಂ ತತ್ಕಾಲ್ ಟಿಕೆಟ್ ಯೋಜನೆ’ 80 ಜನಪ್ರಿಯ ರೈಲ್ವೇಗಳಲ್ಲಿ ಅಕ್ಟೋಬರ್ 1 ರಂದೇ ಜಾರಿಯಾಗಿದೆ. ಈ ವ್ಯವಸ್ಥೆಯನ್ನು ಉಳಿದ ರೈಲುಗಳಿಗೂ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ರೈಲ್ವೆ ಮಂಡಳಿ ಸದಸ್ಯ ಡಿ.ಪಿ ಪಾಂಡೆ ತಿಳಿಸಿದ್ದಾರೆ. ಕಾಚಿಗುಡ – ಬೆಂಗಳೂರು ಎಕ್ಸ್’ಪ್ರೆಸ್ ಸೇರಿದಂತೆ 80 ರೈಲುಗಳಲ್ಲಿ ಹೊಸ ಯೋಜನೆ ಜಾರಿಯಾಗಲಿದೆ.

By suddi9

Leave a Reply

Your email address will not be published. Required fields are marked *