ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದರ  9ನೇ ತರಗತಿಯ ಬಾಲಕನಿಗೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ನಡೆದಿದ್ದು,ಈ ಬಗ್ಗೆ ಆರೋಪಿ ವಿರುದ್ದ ಪೋಕ್ಸೊ ಕಾಯಿದೆಯಡಿ ಕೇಸ್ ದಾಖಲಾಗಿದೆ.   ಆರೋಪಿ ವಿಟ್ಲ ಕನ್ಯಾನ ಗ್ರಾಮದ  ಸುರೇಶ್ ಪ್ರಭು (31) ಎಂಬಾತನನ್ನು ಬಂಧಿಸಲಾಗಿದೆ.

IMG-20200207-WA0058   ಈ ಪ್ರಕರಣದ ಸಂತ್ರಸ್ಥ ಬಾಲಕನು ತರಗತಿಯನ್ನು  ಮುಗಿಸಿ ಕಾಲೇಜಿನ ಮುಂಭಾಗ ನಡೆದುಕೊಂಡು ಮನೆಗೆ ಹೋಗುತ್ತಿದ್ದಾಗ ಆರೋಪಿ ಬಾಲಕನನ್ನು ಪುಸಲಾಯಿಸಿ  ಶಾಲೆಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿದೆ. ಈ ಬಗ್ಗೆ ಬಾಲಕನ ತಾಯಿ ನೀಡಿದ ದೂರಿನಂತೆ  ವಿಟ್ಲ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

By Suddi9

Leave a Reply

Your email address will not be published. Required fields are marked *