ಕಿನ್ನಿಗೋಳಿ :ಮೌಲ್ಯಾಧಾರಿತ, ಸಜ್ಜನ ರಾಜಕಾರಣಿಗಳಲ್ಲಿಅಮರನಾಥ ಶೆಟ್ಟಿ ಒಬ್ಬರು. ಅಜಾತ ಶತ್ರು, ಸರಳ ಸಜ್ಜನಿಕೆ, ಯುವ ಜನರಿಗೆ ಮಾರ್ಗದರ್ಶಿ, ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಜನರಿಗೆ ರಾಜಕೀಯ ರಹಿತ ನಿಸ್ವಾರ್ಥ ಸೇವೆ ನೀಡುತ್ತಿದ್ದರು ಎಂದು ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಹೇಳಿದರು ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ ಅವರ ನಿಧನಕ್ಕೆ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ನಡೆದ ಸಂತಾಪ ಸೂಚಿಸುವ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

6KinniAmaranatha Shettyಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿ ಬದುಕಿದ್ದು ಅವರ ನಡೆ ನುಡಿಗಳು ಮುಂದಿನ ಪೀಳಿಗೆಗೆ ಆದರ್ಶವಾಗಬೇಕು ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ ಅವರ ದಿವ್ಯ ಆತ್ಮಕ್ಕೆ ಮೋಕ್ಷ ಪಾಪ್ತಿಯಾಗಲಿ ಎಂದು ಪ್ರಾರ್ಥಿಸಿದರು.ನಿವೃತ್ತ ಉಪತಹಶಿಲ್ದಾರ್ ವೈ. ಯೋಗೀಶ್ ರಾವ್ ಮಾತನಾಡಿ ಒಂದೇ ಪಕ್ಷ ನಿಷ್ಠೆಯ ಸಜ್ಜನಿಕೆಯ ರಾಜಕಾರಣ, ಹಳ್ಳಿಗಳ ರಸ್ತೆಗಳ ವಿಷಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿದ ಮಹಾನ್ ನಾಯಕ. ಅವರ ಮನೋಧರ್ಮ ಆದರ್ಶವಾಗಿದೆ ಎಂದು ಹೇಳಿದರು.
ಈ ಸಂದರ್ಭ ಸುರಗಿರಿ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಅತ್ತೂರು ಭಂಡಾರಮನೆ ಶಂಭು ಮುಕ್ಕಾಲ್ದಿ, ನ್ಯಾಯವಾದಿ ಐಕಳ ಮುರಳೀಧರ ಶೆಟ್ಟಿ, ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಕೆ. ಲವ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಜೀವನ್ ಶೆಟ್ಟಿ, ಪಿ. ಸತೀಶ್ ರಾವ್, ಶೇóಷರಾಮ ಶೆಟ್ಟಿ, ಸಾಯಿನಾಥ ಶೆಟ್ಟಿ, ಸತೀಶ್ಚಂದ್ರ ಹೆಗ್ಡೆ, ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ಜಯಪಾಲಶೆಟ್ಟಿ, ಗಂಗಾಧರ ಶೆಟ್ಟಿ, ಮಹಾಬಲ ರೈ, ದೇವಿಪ್ರಸಾದ್ ಶೆಟ್ಟಿ, ಪ್ರಸನ್ನ ಶೆಟ್ಟಿ ಅತ್ತೂರು ಗುತ್ತು, ಪ್ರಕಾಶ ಶೆಟ್ಟಿ ಸುರಗಿರಿ, ರೈತ ಸಂಘದ ಶ್ರೀಧರ ಶೆಟ್ಟಿ, ಶಾಂಭವಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *