ಬಂಟ್ವಾಳ: ಕೊರೊನೊ ಸೋಂಕಿಗೆ ಸಂಬಂಧಿಸಿದಂತೆ ಯಾರು ಕೂಡ ಆತಂಕಪಡಬೇಕಾಗಿಲ್ಲ ಈಗಾಗಲೇ ಜಿಲ್ಲೆಯಲ್ಲಿ ಈಬಗ್ಗೆ ಎಲ್ಲಾ ರೀತಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾರಿಗಾದರೂ ರೋಗ ಲಕ್ಷಣಗಳು ಕಂಡು ಬಂದಲ್ಲಿ ಆರೋಗ್ಯ ಇಲಾಖೆಯನ್ನು ಸಂಪರ್ಪಕಿಸುವಂತೆ ಬಂಟ್ವಾಳ ತಾ.ಆರೋಗ್ಯಾಧಿಕಾರಿ ದೀಪಾ ಪ್ರಭು ಅವರು ಹೇಳಿದ್ದಾರೆ.ಈ ಸೋಂಕಿಗೆ ನಿರ್ದಿಷ್ಟವಾದ ಚಿಕಿತ್ಸೆ ಕಂಡುಹಿಡಿಯಲಾಗಿಲ್ಲ, ರೋಗ ಲಕ್ಷಣ ಗಳಿಗನುಗುಣವಾಗಿ ಚಿಕಿತ್ಸೆ ನೀಡಲು ಅವಕಾಶವಿದೆ.
ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಹೆಚ್ಚಾಗಿ ಪ್ರವಾಸಿಗರಲ್ಲಿ ಈ ಸೋಂಕಿನ ಲಕ್ಷಣ ಕಂಡು ಬರುವ ಸಾಧ್ಯತೆಗಳಿದ್ದು, ವಿಮಾನ ನಿಲ್ದಾಣಗಳಲ್ಲಿ ಪ್ರವಾಸಿಗರನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಅವರುತಿಳಿಸಿದರು.ಬಂಟ್ವಾಳ ತಾಪಂನ ಎಸ್.ಜಿ.ಎಸ್.ವೈ.ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಬುಧವಾತ ನಡೆದ ಮಾಸಿಕ ಪ್ರಗತಿಪರಿಶೀಲನಾ ಸಭೆಯಲ್ಲಿ ಕೊರೊನೊ ಸೋಂಕು ಕುರಿತಾದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಅವರು ಸಭೆಗೆ ಈ ಮಾಹಿತಿ ನೀಡಿದರು.ವಿದ್ಯಾರ್ಥಿಗಳಿಗೆ ಜಂತುಹುಳ ಮಾತ್ರೆಗಳನ್ನು ಎಲ್ಲಾ ಶಾಲೆಗಳಿಗೆ ವಿತರಿಲಾಗುತ್ತಿದ್ದು, ಖಾಸಗಿ ಶಾಲೆಗಳಲ್ಲಿ ಮಾತ್ರೆ ಪಡೆದುಕೊಳ್ಳಲು ನಿರಾಕರಿಸಲಾಗುತ್ತಿದೆ, ಹಾಗಾಗಿ ಮಾತ್ರೆಗಳ ವಿತರಣೆಗೆ ಅಡ್ಡಿಯಾಗುತ್ತಿದ್ದು ಶಿಕ್ಷಣ ಇಲಾಖಾ ಧಿಕಾರಿಗಳ ಸಹಕಾರ ಈ ಸಂದರ್ಭ ದಲ್ಲಿ ಅವರು ಕೋರಿದರಲ್ಲದೆ ಈ ವಿಚಾರದಲ್ಲಿ ಪೋಷಕರಿಗೂ ಸರಿಯಾದ ಮಾಹಿತಿ ನೀಡಿ ಮನವೊಲಿಸುವ ಪ್ರಯತ್ನ ಮಾಡುವಂತೆ ತಿಳಿಸಿದರು.ಮಾರ್ಚ್ ತಿಂಗಳಿನಿಂದ ಕುಡಿಯುವ ನೀರಿನ ಸ್ಥಾವರ ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಮೆಸ್ಕಾಂ ಅಧಿಕಾರಿಗಳಿಗೆ ಇಒ ರಾಜಣ್ಣ ಸೂಚಿಸಿದರಲ್ಲದೆ ಈ ಸಮಯದಲ್ಲಿ ವಿದ್ಯುತ್ ಪೂರೈಕೆಗೆ ಬೇಕಾದ ಎಲ್ಲಾ ವ್ಯವಸ್ಥೆ ಗಳನ್ನು ಈಗಲೇ ಪೂರ್ವ ತಯಾರಿ ಮಾಡಿಕೊಳ್ಳಬೇಕು, ಮೇ. ತಿಂಗಳ ಕೊನೆಯಲ್ಲಿ ತಾಲೂಕಿನ ಎಲ್ಲಿ ಕೂಡ ಕುಡಿಯುವ ನೀರಿನ ಸಮಸ್ಯೆಯ ದೂರು ಬಾರದಂತೆ ಎಚ್ಚರಿಕೆ ವಹಿಸುವಂತೆಯು ತಾಕೀತು ಮಾಡಿದರು.ಫೆ. ಅಂತ್ಯದದೊಳಗೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದ ಕಾದಿರಿಸಿರುವ ಅನುದಾನವನ್ನು ಬಳಕೆ ಮಾಡುವಂತೆ ಅಧಿಕಾರಿಗಳಿಗೆ ಇ.ಒ.ರಾಜಣ್ಣ ನಿರ್ದೇಶಿಸಿದರು.ಉನ್ನತೀಕರಿಸಿದ ನಾಲ್ಕು ಅಂಗನವಾಡಿ ಕಟ್ಟಡಗಳ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಬಂಧಿಸಿದ ವರಿಗಡ ಒತ್ತಡ ಹೇರುವಂತೆ ಬಂಟ್ವಾಳ ಪ್ರಭಾರ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ಅವರಿಗೆ ಸೂಚಿಸಲಾಯಿತಲ್ಲದೆ ಕ್ರಿಯಾಯೋಜನೆಗೆ ಸೀಮಿತವಾಗಿ ಕಾಮಗಾರಿ ನಡೆಸುವಂತೆ ಇಒ ರಾಜಣ್ಣ ತಿಳಿಸಿದರು.ಭಾಗ್ಯ ಜ್ಯೋತಿ, ಕುಟೀರಜ್ಯೋತಿ ಮತ್ತು ಹತ್ತು ಹೆಚ್.ಪಿ.ವರೆಗಿನ ಕೃಷಿ ಪಂಪ್ ಸೆಟ್ ಗಳನ್ನು ಹೊಂದಿರುವ ಕೃಷಿಕರ ಅಗತ್ಯ ದಾಖಲೆಗಳನ್ನು ಪಡೆಯುವ ಬಗ್ಗೆ ದಗೊಂದವುಂಟಾಗಿದ್ದು,ಸಾಕಷ್ಟು ದೂರುಗಳು ಬಂದಿದೆ.ಹಾಗಾಗಿ ಮೆಸ್ಕಾಂ ಸಿಬ್ಬಂದಿಗಳು ರೈತರ ಮನೆಗೆ ಭೇಟಿ ನೀಡುವ ವೇಳೆ ಪೂರ್ವ ಮಾಹಿತಿ ತೆರಳುವಂತೆ ಅಧ್ಯಕ್ಷ ಚಂದ್ರಹಾಸ ಕರ್ಕೇರ ಸೂಚಿಸಿದರು.
ತಾ.ಪಂ.ಇಲಾಖೆಯ ಜಮೀನಿನ ಸರ್ವೇ ಕಾರ್ಯ ನಡೆದು ತಿಂಗಳಾದರೂ ದಾಖಲೆಗಳನ್ನು ಇನ್ನು ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಇಒ , ಕೂಡಲೇ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತಯಾರಿಸಿ ನೀಡುವಂತೆ ತಿಳಿಸಿದರಲ್ಲದೆ ಎಲ್ಲಾ ಸರಕಾರಿ ಇಲಾಖೆಗೆ ಸಂಬಂಧಿಸಿದ ಜಮೀನಿನ ಸರ್ವೇ ಕಾರ್ಯ ನಡೆಸಿ ದಾಖಲೆಗಳನ್ನು ಸಿದ್ದಪಡಿಸುವಂತೆಯು ಕಂದಾಯ ಇಲಾಖಾ ಧಿಕಾರಿಗಳಿಗೆ ತಿಳಿಸಿದರು.
