ಬಂಟ್ವಾಳ : ಯಕ್ಷಗಾನ ಕಲಾವಿದ,ಆರ್ಥಧಾರಿ    ಅಜೆಕಲ ಹರಿಶ್ಚಂದ್ರ ಶೆಟ್ಟಿ(70) ಅವರು ಹೃದಯಾಘಾತಕ್ಕೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.                              ಬಂಟ್ವಾಳ ಸಮೀಪದ ಅಜೆಕಲ ನಿವಾಸಿಯಾಗಿರುವ ಇವರು ಬಂಟ್ವಾಳ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುವ ವಾರದ ಯಕ್ಷಗಾನ ಕೂಟದಲ್ಲಿ   ನಿತ್ಯ ಆರ್ಥಧಾರಿಯಾಗಿ ಭಾಗವಹಿಸಿ , ವೆಂಕಟರಮಣ ದೇವಳದ ಯಕ್ಷಗಾನ ಸಂಘವನ್ನು ಉಳಿಸಿ ಬೆಳೆಸುವಲ್ಲಿ ಇವರ ಕೊಡುಗೆ ಅಪಾರವಾಗಿದೆ.

IMG-20200203-WA0040 (1)
ಯಕ್ಷಗಾನ ಕ್ಷೇತ್ತದ ಧೀಮಂತ ಅರ್ಥಧಾರಿಗಳಾದ ಶೇಣಿ , ತೆಕ್ಕಟ್ಟೆ , ಸಾಮಗರಂತ ಮೇರು ಕಲಾವಿದರೊಂದಿಗೆ ಅರ್ಥ  ಮಾತಾಡಿ ಸೈ ಎನಿಸಿಕೊಂಡವರು.ಅಮ್ಟಾಡಿ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಗಡಿಪ್ರಧಾನರಲ್ಲಬ್ಬರಾಗಿದ್ದು,ಜನಸಂಘದ ಕಾಲದಲ್ಲಿ ಹೋರಾಟದಲ್ಲಿಯು ತೊಡಗಿಸಿಕೊಂಡಿದ್ದರು.    ಇವರು  ಯಕ್ಷಗಾನಕ್ಕೆ ನೀಡಿದ ಸೇವೆಯನ್ನು ಗುರುತಿಸಿ  ಹಲವಾರು  ಸನ್ಮಾನಕ್ಕು ಭಾಜನರಾಗಿದ್ದರು.  ಮೃತರು ಪತ್ನಿ,ಇಬ್ಬರು ಗಂಡು,ಒರ್ವ ಪುತ್ರಿಯ ಸಹಿತ ಬಂಧುಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಶಾಸಕ ಯು.ರಾಜೇಶ್ ನಾಯ್ಕ್,ಮಾಜಿ ಸಚಿವ ರಮಾನಾಥ ರೈ,ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *