ಕೈಕಂಬ:ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಅಂಗ ಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ. ಮಂಗಳೂರು. ಕೇಂದ್ರದ ವತಿಯಿಂದ ಕಲ್ಲಂಗಡಿ ಬೆಳೆಯಲ್ಲಿ ಕೀಟ ಮತ್ತು ರೋಗ ನಿರ್ವಹಣೆ ಕುರಿತು ಮುಂಚೂಣಿ ಪ್ರಾತ್ಯಕ್ಷಿಕೆ ಅಡಿಯಲ್ಲಿ ತರಬೇತಿ ಕಾರ್ಯಕ್ರಮವನ್ನು ಜ.: 17 ರಂದು ಬಂಟ್ವಾಳ ತಾಲ್ಲೂಕಿನ ಪೊಳಲಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಲ್ಲಂಗಡಿ ಬೇಸಿಗೆ ಕಾಲದ ಪ್ರಮುಖ ಬೆಳೆ, ಕಾಯಿ ಹಣ್ಣಾಗುವಾಗ ಒಣ ಹವೆ ಇದ್ದರೆ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಉಷ್ಣವಲಯದ ಹೆಚ್ಚಿನ ಉಷ್ಣ ಹವೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಇರುವ ವಾತಾವರಣ ಅತ್ಯಧಿಕ ಇಳುವರಿಗೆ ಅಗತ್ಯ.

IMG-20200117-WA0003ಪೊಳಲಿ ಗ್ರಾಮದಲ್ಲಿ ಏಪ್ರಿಲ್ ತಿಂಗಳಲ್ಲಿ ಜಾತ್ರೆ ಇರುವ ಕಾರಣ ಹೆಚ್ಚಿನ ರೈತರು ಕಲ್ಲಂಗಡಿ ಬೆಳೆಯನ್ನು ಬೆಳೆಯುತ್ತಾರೆ. ಈ ಪ್ರದೇಶದ ಸಣ್ಣ ಹಿಡುವಳಿದಾರರಿಗೆ ಒಂದು ವರದಾನ ಎನ್ನಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿಯಾದ ಡಾ. ರಶ್ಮಿ ಆರ್. ರವರು ಕಲ್ಲಂಗಡಿ ಕೃಷಿಯನ್ನು ರೈತರು ವೈಜ್ಞಾನಿಕವಾಗಿ ಮಾಡುವುದರಿಂದ ಹೆಚ್ಚು ಆದಾಯ ಗಳಿಸಬಹುದು. ಬೀಜ ಹಾಕಿದ 20 ದಿನಗಳ ನಂತರ ಮುಖ್ಯ ಕುಡಿಗಳನ್ನು ಕತ್ತರಿಸುವುದರಿಂದ ಹೆಚ್ಚು ಮಗ್ಗಲು ಇಲುಕುಗಳನ್ನು ಬಿಡುವುದು.

IMG-20200117-WA0028ಬಳ್ಳಿಯ ಹನ್ನೊಂದನೆಯ ಗೆಣ್ಣಿಗಿಂತ ಮುಂದಕ್ಕೆ ಮೂಡುವ ಹೆಣ್ಣು ಹೂಗಳನ್ನು ತೆಗೆಯುವುದರಿಂದ ಬಳ್ಳಿಯ ಹೆಚ್ಚಿನ ಬೆಳವಣಿಗೆಯನ್ನು ಪಡೆಯಲು ಸಾಧ್ಯ. ರೈತರು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ನಿರ್ದಿಷ್ಟ ಪ್ರಮಾಣದ ನೀರನ್ನು ಸಮರ್ಪಕವಾಗಿ ನೀಡಬಹುದಲ್ಲದೆ ಹೆಚ್ಚು ಇಳುವರಿಯನ್ನು ನಿರೀಕ್ಷಿಸಬಹುದು. ಗಂಧಕಯುಕ್ತ ಔಷಧಿಗಳನ್ನು ಯಾವುದೇ ಸಂದರ್ಭದಲ್ಲಿ ಈ ಬೆಳೆಗೆ ಉಪಯೋಗಿಸಬಾರದು. ಮತ್ತು ಎಕರೆಗೆ ಒಂದು ಜೇನು ಪೆಟ್ಟಿಗೆ ಇಡುವುದರಿಂದ ಕಲ್ಲಂಗಡಿ ಇಳುವರಿ ಹೆಚ್ಚಿಸಬಹುದು ಎಂದು ಕಲ್ಲಂಗಡಿ ಬೆಳೆಯ ವೈಜ್ಞಾನಿಕ ಕೃಷಿಯ ಬಗ್ಗೆ ಸಂಪೂರ್ಣವಾಗಿ ರೈತರಿಗೆ ತಿಳಿಸಿಕೊಟ್ಟರು.

IMG-20200117-WA0029

ಡಾ. ಕೇದಾರನಾಥ್, ಸಸ್ಯ ಸಂರಕ್ಷಣೆಯ ವಿಜ್ಞಾನಿಯವರು ಕಲ್ಲಂಗಡಿ ಬೆಳೆಯಲ್ಲಿ ಪ್ರಮುಖ ಕೀಟ ಮತ್ತು ರೋಗಗಳ ಹತೋಟಿ ಕ್ರಮಗಳು, ಸಮಗ್ರ ನಿರ್ವಹಣೆ ಮತ್ತು ಅತಿಯಾದ ಕೀಟ ಮತ್ತು ರೋಗನಾಶಕಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಭೂಮಿಯನ್ನು ಸಿದ್ಧಗೊಳಿಸಿ, ಕಲ್ಲಂಗಡಿ ಬೀಜವನ್ನು ಬಿತ್ತುವುದರ ಬಗ್ಗೆ ಪ್ರಾತ್ಯಕ್ಷಿಕೆಯನ್ನು ರೈತರ ಹೊಲದಲ್ಲಿ ವಿಜ್ಞಾನಿಗಳು ತೋರಿಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ಸಂಪತ್ ಕುಮಾರ್ ಶೆಟ್ಟಿ ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಹಣಾದಿಕಾರಿ, ಪೊಳಲಿ ಗ್ರಾಮದ 15 ಜನ ರೈತರು ಹಾಗೂ ಕೇಂದ್ರದ ವಿಜ್ಞಾನಿಗಳು ಭಾಗವಹಿಸಿದರು.

 

By suddi9

Leave a Reply

Your email address will not be published. Required fields are marked *