ಬಂಟ್ವಾಳ: ಜೇಸಿಐ ಬಂಟ್ವಾಳದ ಪದಗ್ರಹಣ ಸಮಾರಂಭ ಶನಿವಾರ ಸಂಜೆ ಕೈಕಂಬದ ಫೈವ್‍ಸ್ಟಾರ್ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿ ಜೇಸಿ ವಲಯ 15ರ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ದೀಪ ಪ್ರಜ್ವಲಿಸಿದರು.

BTW_JAN27_2
ಅವರು ಮಾತನಾಡಿ ಜೇಸಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಯುವ ಸಮುದಾಯ ನಾಯಕತ್ವ ಬೆಳೆಸಿಕೊಳ್ಳಲು ಸಾಧ್ಯವಿದೆ. ಜೇಸಿಐ ವಲಯ 15 ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು ಇದರ ಯಶಸ್ಸಿಗೆ ಎಲ್ಲಾ ಜೇಸಿಗಳ ನೆರವು ಅಗತ್ಯ ಎಂದರು.
ಜೇಸಿಐನ ಪೂರ್ವ ರಾಷ್ಟ್ರೀಯ ನಿರ್ದೇಶಕ ಸಂಪತ್‍ಕುಮಾರ್ ಸುವರ್ಣ ಶುಭ ಕೋರಿದರು. ನಿರ್ಗಮನ ಅಧ್ಯಕ್ಷ ಯತೀಶ್ ಕರ್ಕೇರಾ ವರದಿ ವಾಚಿಸಿದರು. ನೂತನ ಅಧ್ಯಕ್ಷರಾಗಿ ಸದಾನಂದ ಬಿ. ಬಂಗೇರ ಅಧಿಕಾರ ಸ್ವೀಕರಿಸಿದರು. ನೂತನ ಪದಾಧಿಕಾರಿಗಳಿಗೆ ಹಾಗೂ ನೂತನ ಸದಸ್ಯರಾಗಿ ಪ್ರಮಾಣ ವಚನ ಭೋದಿಸಲಾಯಿತು. ವೇದಿಕೆಯಲ್ಲಿ ವಲಯ ಪೂರ್ವಾಧ್ಯಕ್ಷ ಮೇದಾವಿ, ವಲಯ ಸಂಯೋಜಕ ಲೋಕೇಶ್ ಸುವರ್ಣ, ನಿರ್ಗಮನ ಕಾರ್ಯದರ್ಶಿ ಉಮೇಶ್ ಪೂಜಾರಿ, ನೂತನ ಕಾರ್ಯದರ್ಶಿ ಗಣೇಶ್ ಕೆ.ಕುಲಾಲ್, ನೂತನ ಕೋಶಾಧಿಕಾರಿ ಮೋಹನ್ ಎನ್. ಉಪಸ್ಥಿತರಿದ್ದರು.
ಯತೀಶ್ ಕರ್ಕೇರಾ ಸ್ವಾಗತಿಸಿ, ಗಣೇಶ್ ಕೆ. ವಂದಿಸಿದರು, ಪೂರ್ವಾಧ್ಯಕ್ಷ ಸಂದೀಪ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *