ಫೆ.16ರಂದು ಏತಮೊಗರುಗುತ್ತುವಿನಲ್ಲಿ `ಗಡಿಪ್ರದಾನ ಸಮಾರಂಭ’
ಸುದ್ದಿ9ಕೈಕಂಬ: ಕಂದಾವರ ಗ್ರಾ.ಪಂ.ವ್ಯಾಪ್ತಿಯ ಕಂದಾವರ ಗ್ರಾಮದ ಬೈಲು ಏತಮೊಗರು ಗುತ್ತುವಿನಲ್ಲಿ ಫೆ.16ರಂದು ಗಡಿಪ್ರದಾನ ಸಮಾರಂಭ ಜರಗಲಿದೆ.
ಫೆ.15ರಂದು ಸಂಜೆ ಏತಮೊಗರು ಗುತ್ತುವಿನಿಂದ ಭಂಡಾರ ಹೊರಟು ಬೈಲು ಮೂಡುಕರೆ ಧೂಮಾವತಿ ದೈವಸ್ಥಾನಕ್ಕೆ ಬರಲಿದೆ. ಫೆ.16ರಂದು ಬೆಳಿಗ್ಗೆ 9 ಗಂಟೆಗೆ ಧೂಮಾವತಿ ದೈವಸ್ಥಾನದಲ್ಲಿ ತುಡಾರ ಬಲಿ ಮತ್ತು ದೈವ ದರ್ಶನ ಹಾಗೂ ಗಡಿಪ್ರದಾನವು ಬೈಲು ಏತ ಮೊಗರುಗುತ್ತು ಸದಾಶಿವ ಶೆಟ್ಟಿ ಅವರಿಗೆ ನಡೆಯಲಿದೆ.
ಪೂವರ್ಾಹ್ನ 11 ಗಂಟೆಗೆ ಏತಮೊಗರು ಗುತ್ತು ಚಾವಡಿಯಲ್ಲಿ ಧೂಮಾವತಿ ದೈವಕ್ಕೆ ಹೋಮ ಕಜ್ಜಾಯ, 11.30ಕ್ಕೆ ಗಡಿಪ್ರದಾನ ಚಿಂತನಾ ಸಭಾ ಕಾರ್ಯಕ್ರಮ ನಡೆಯಲಿದ್ದು, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಡಾ.ಸೋಂದಾ ಭಾಸ್ಕರ್ ಭಟ್, ಗುತ್ತು ಮತ್ತು ಗಡಿಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸುವರು. ಕೊಳಚೂರು ಸುಕುಮಾರ ಶೆಟ್ಟಿ, ಡಾ.ಹಂಸರಾಜ ಆಳ್ವ
ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ, ಅಪರಾಹ್ನ 3ರಿಂದ ತಾಳಮದ್ದಲೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

 

By suddi9

Leave a Reply

Your email address will not be published. Required fields are marked *