ಕೈಕಂಬ : ಗುರುಪುರ ಗೋಳಿದಡಿ ಗುತ್ತಿನ ವಾರ್ಷಿಕ ಗುತ್ತುದ ವರ್ಸೊದ ಪರ್ಬೊ ಕಾರ್ಯಕ್ರಮಕ್ಕೆ ಜ. 19 ರಂದು ಭಾನುವಾರ ಬೆಳಿಗ್ಗೆ ಪಾರಂಪರಿಕ ಶೈಲಿಯಲ್ಲಿ ಚಾಲನೆ ನೀಡಲಾಯಿತು, ಪಾರಂಪರಿಕ ಕೃಷಿಕರಾದ ಬೆಳ್ಳಿಬೆಟ್ಟು ಗುತ್ತು ರಮೇಶ್ ಹೆಗ್ಡೆಯವರು ದೀಪ ಬೆಳಗಿಸುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ನೀಡಿದರು. ಮಾತನಾಡಿ ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ನಾವು ನಮ್ಮ ಸಂಸ್ಕ್ರತಿ, ಸಂಪ್ರದಾಯಗಳನ್ನು ಮರೆಯುತ್ತಿರುವ ಸಂದರ್ಭದಲ್ಲಿ, ಗ್ರಾಮೀಣ ಪ್ರದೇಶದ ಮೂಲ ಸಂಸ್ಕೃತಿಯನ್ನು ಇಂದು ಇಲ್ಲಿ ಮತ್ತೊಮ್ಮೆ ಕಂಡೆ, ಎರಡು ದಿನಗಳ ಈ ಹಬ್ಬದ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಇಂದಿನ ಪೀಳಿಗೆಗೆ ತಿಳಿಸಿ , ಉಳಿಸುವ, ಕಾರ್ಯ ಮಾಡುತ್ತಿರುವ ವರ್ಧಮಾನ ದುರ್ಗಾಪ್ರಸಾದ್ ಶೆಟ್ರನ್ನು ಅಭಿನಂದಿಸುತ್ತೇನೆ ಎಂದರು. d217d989-1de3-4728-96da-f5a61594c344

ಇನ್ನೋರ್ವ ಅತಿಥಿ, ದೇಸೀ ಇಟ್ಟಿಗೆ ತಯಾರಕ ಯಾಕೂಬ್ ಅಹಮ್ಮದ್ ಸಲಾಂ ಮಾತನಾಡಿ ಸುಮಾರು 25 ವರ್ಷಗಳಹಿಂದೆ, ನಡೆದಾಡಲೂ ಭಯಪಡುತ್ತಿದ್ದ ಪ್ರದೇಶದಲ್ಲಿ ಇಂದು ಎರಡು ದಿನಗಳ ವೈಭವದ ಗುತ್ತುದ ವರ್ಸೊದ ಪರ್ಬೊ ನಡೆಸುವ ಮೂಲಕ ಈ ಪ್ರದೇಶ ನಂದನವನ ದಂತೆ ಕಂಗೊಳಿಸುತ್ತಿದೆ ಎಂದರೆ ಅದಕ್ಕೆ ಗೋಳಿದಡಿ ಗುತ್ತು ಕಾರಣ ಎಂದರು.

ವೇದಿಕೆಯಲ್ಲಿ ಹಿರಿಯರಾದ ವನಜಾ ದೇರಣ್ಣ ಶೆಟ್ಟಿ, ಜಿ. ಕೃಷ್ಣಪ್ಪ ಬೆಳ್ಳೂರು, ಹಿರಿಯ ರಿಕ್ಷಾ ಚಾಲಕ ಸಿಲ್ವೆಸ್ಟರ್ ಡಿ’ಸೋಜಾ ತಾರಿಗುರಿ, ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಮತ್ತು ಅವರ ಪತ್ನಿ, ಮಕ್ಕಳು ಹಾಗೂ ಇತರರು ಉಪಸ್ಥಿತರಿದ್ದರು, ಸುನಿಲಾ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ಚಿಕ್ಕಮಂಗಳೂರು ವೇದವಿಜ್ಞಾನ ಮಂದಿರದ ಬ್ರಹ್ಮ ಶ್ರೀ ಶಿರೋಮಣಿ ಕೆ. ಯಸ್. ನಿತ್ಯಾನಂದ ಅವರ ಉಪಸ್ಥಿತಿಯಲ್ಲಿ, ಗಣ್ಯರ ಸಮ್ಮುಖದಲ್ಲಿ ಗುರುಪುರ ಪಲ್ಗುಣಿ ನದಿ ತಟಾಕದಲ್ಲಿ ಪುನರುತ್ಥಾನ ಗೊಳ್ಳಲಿರುವ ಶ್ರೀ ಮಹಾಕಾಳೇಶ್ವರ ದೇವಸ್ಥಾನದ ಸುಂದರವಾದ ಪ್ರತಿಕೃತಿಯನ್ನು ಅನಾವರಣಗೊಳಿಸಲಾಯಿತು,

ಶ್ರೀ ಗಣಪತಿ ಹೋಮ ಮತ್ತು ಚಂಡಿಕಾ ಹೋಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಗಳು ಹಾಗೂ ಗುತ್ತಿನ ಚಾವಡಿಯಲ್ಲಿ ಕಾರ್ಕಳದ ನಾಗರಾಜ ಕಿಣಿ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ನಡೆಯಿತು.
20 ರ ಸೋಮವಾರ ಸಂಜೆ 6 ಗಂಟೆಗೆ ಗುತ್ತಿನ ವರ್ಷದ ಒಡ್ಡೋಲಗ, ಶಕ್ತಿ ಕಲ್ಲು ಎತ್ತುವ ಸ್ಪರ್ಧೆ, ನ್ರತ್ಯವೈಭವ, ರಾತ್ರಿ 8.15 ರಿಂದ ಯಾದೊಂಕೀ ಶ್ಯಾಮ್ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ

By suddi9

Leave a Reply

Your email address will not be published. Required fields are marked *