ಕಟೀಲು: ದೇವಸ್ಥಾನ ದೈವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಇವುಗಳನ್ನು ಅಭಿವೃದ್ಧಿ ಪಡಿಸಲು ಭಕ್ತರ ಸಹಕಾರ ಅತೀ ಅಗತ್ಯ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಪುನರೂರು ಶ್ರೀ ಬ್ರಹ್ಮಮುಗೇರ ದೈವಸ್ಥಾನದಲ್ಲಿ ವಾರ್ಷಿಕ ನೇಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ ದೈವಸ್ಥಾನಗಳು ನಂಬಿದ ಭಕ್ತರ ಅಶೋತ್ತರಗಳನ್ನು ಈಡೇರಿಸಿ ಕಾರಣಿಕ ಕ್ಷೇತ್ರಗಳಾಗುತ್ತಿವೆ ಎಂದು ಹೇಳಿದರು. ಪುನರೂರು ಶ್ರೀ ವಿಶ್ವನಾಥ ದೇವಳದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಹಲವಾರು ವರ್ಷದಿಂದ ಸೇವೆ ಸಲ್ಲಿಸಿದ ಹಿರಿಯರಾದ ಪೂವಪ್ಪ ದೇವಾಡಿಗ ಪಲ್ಕೆ, ದಾಮೋದರ ಸುವರ್ಣ ಎಸ್. ಕೋಡಿ, ಮಂಜು ಕಲ್ಲಜೋರ, ರಘುರಾಮ ಪುನರೂರು, ವೀರಪ್ಪ ಪಾಣಾರ ಆತ್ರಾಡಿ ಅವರನ್ನು ಸನ್ಮಾನಿಸಲಾಯಿತು.ಬಿಜೆಪಿಯ ನಾಯಕ ಈಶ್ವರ್ ಕಟೀಲು, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕಿನ್ನಿಗೋಳಿ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ದೇವಾಡಿಗ , ರಾಮಚಂದ್ರ ರಾವ್ ಎಸ್.ಕೊಡಿ, ಸುರೇಶ್ ರಾವ್ ಶ್ರೀನಿಧಿ ಪುನರೂರು, ರವಿ ಶೆಟ್ಟಿ ಪುನರೂರುಗುತ್ತು, ಮುತ್ತಪ್ಪ ಗುರಿಕಾರ, ಜೀಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ಗೋಪಾಲಕೃಷ್ಣ ಆರ್. ಪುನರೂರು ಮತ್ತಿತತರು ಉಪಸ್ಥಿರಿದ್ದರು.
ಸಂತೋಷ್ ಶೆಟ್ಟಿ ಪುನರೂರು ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.
