ಕೈಕಂಬ : ಗುರುಪುರ ಕೈಕಂಬಕ್ಕೆ ಹತ್ತಿರದ ರೋಸಾ ಮಿಸ್ತಿಕಾ ಶಾಲೆ ಹಾಗೂ ಪೊಳಲಿ ದ್ವಾರದ ಮಧ್ಯೆ ಶುಕ್ರವಾರ ಮಧ್ಯಾಹ್ನ 12:30ಕ್ಕೆ ಸಂಭವಿಸಿದ ಬೈಕ್-ಟೆಂಪೋ ಭೀಕರ ದುರಂತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ.3vpapagatha

ಸುಕುಮಾರ್(35) ಎಂಬವರು ಕೆಲಸದ ನಿಮಿತ್ತ ಕೈಕಂಬದಿಂದ ಗುರುಪುರವಾಗಿ ಮಂಗಳೂರಿನತ್ತ ತನ್ನ ಬುಲೆಟ್ ಬೈಕ್ನಲ್ಲಿ ತೆರಲುತ್ತಿದ್ದ ಸುಕುಮಾರ್ ಗೆ ಅಲ್ಲಿದ್ದ ಹಂಸ್ ಇದ್ದ ಅರಿವಿಗೆ ಭಾರದೆ ಬುಲೆಟ್ ನಿಯಂತ್ರಣ ಕಳೆದುಕೊಂಡು ಎದುರು ದಿಕ್ಕಿನಿಂದ ಕೈಕಂಬದತ್ತ ಬರುತ್ತಿದ್ದ ಟೆಂಪೊಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ.ವೃತ್ತಿಯಲ್ಲಿ ಇಂಜೀನೀಯರ್ ಆಗಿದ್ದರು. ಮೃತರು ಮಂಗಳೂರು ತೊಕ್ಕೊಟ್ಟು ಕುಂಪಲದ ಸರಳಾಯ ಲೇನ್ ಆದಿಶಕ್ತಿ ದೇವಸ್ಥಾನ ಬಳಿಯ ನಿವಾಸಿಯಾಗಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

By suddi9

Leave a Reply

Your email address will not be published. Required fields are marked *