ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರ ವತಿಯಿಂದ ಇತ್ತೀಚೆಗೆ ಉಡುಪಿಯಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ, ಮುಂಬಯಿ ಕನ್ನಡ ರಂಗಭೂಮಿಯ ಹೆಸರಾಂತ ನಟ ಮೋಹನ ಮಾರ್ನಾಡ್ ಅವರನ್ನು ಖ್ಯಾತ ಸಾಹಿತಿ ಡಾ|ನಾ. ಸೋಮೇಶ್ವರ ಅವರು ಗೌರವಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ವಿಶ್ವನಾಥ ಶೆಣಿೈ, ಅಧ್ಯಕ್ಷರಾದ ಪ್ರೊ. ಶಂಕರ್ , ಕಲಾವಿದರಾದ ಗೀತಂ ಗಿರೀಶ್ ,ರಾಜೇಶ್ ಭಟ್ ಪಣಿಯಾಡಿ , ರವಿರಾಜ್ ಹೆಚ್ ಪಿ, ಶಿಲ್ಪ ಜೋಷಿ , ವಿವೇಕಾನಂದ , ಶ್ಯಾಮ್ ಭಟ್ ,ರಾಘವೇಂದ್ರ ಪ್ರಭು ಕರ್ವಾಲು ,ರಾಘವೇಂದ್ರ ಮಹೇಶ್ ಮಲ್ಪೆ , ಭಾವನ ಕೆರೆಮಠ ಮೊದಲಾದವರು ಉಪಸ್ಥಿತರಿದ್ದರು.

