ಹಾವಿನ ವಿಷ ಹೀರಿ ಗೆಳೆಯನನ್ನು ಕಾಪಾಡಿದ ಬಾಲಕಿ ಶೌರ್ಯ ಪ್ರಶಸ್ತಿ
ಬಂಟ್ವಾಳ: ಶಾಲೆಯಲ್ಲಿ ಆಡುತಿದ್ದ ವೇಳೆ ಹಾವಿನ ಕಡಿತಕ್ಕೆ ಒಳಗಾದ ಗೆಳೆಯನ ದೇಹದಿಂದ ರಕ್ತವನ್ನು ಹೀರಿ ಆತನ ಪ್ರಾಣ ಉಳಿಸಲು ನೆರವಾದ ಬಂಟ್ವಾಳದ ನಾಯಿಲ ಗ್ರಾಮದ ಬಾಲಕಿ ಪ್ರತೀಕ್ಷಾಗೆ ಕೃಷ್ಣಾಪುರದ ಗ್ರೀನ್ ಸ್ಟಾರ್ ಸ್ಪೋಟ್ಸರ್್ ಕ್ಲಬ್(ರಿ) ಶೌರ್ಯ ಪ್ರಶಸ್ತಿ ನೀಡಿ ಸನ್ಮಾನಿಸಲು ತೀಮರ್ಾನಿಸಿದೆ.
ನಾಯಿಲ ಸಕರ್ಾರಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರತೀಕ್ಷಾಳ ಸಾಹಸವನ್ನು ಗಮನಿಸಿದ ಕ್ಲಬ್ ಈ ನಿಧರ್ಾರಕ್ಕೆ ಮುಂದಾಗಿದೆ. ಇಂದು(ಶನಿವಾರ) ಸಂಜೆ ಕೃಷ್ಣಾಪುರದಲ್ಲಿ ನಡೆಯಲಿರುವ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಸಭಾಕಾರ್ಯಕ್ರಮದ ವೇಳೆ ಮಾನ್ಯ ಆರೋಗ್ಯ ಸಚಿವರಾದ ಯು.ಟಿ ಖಾದರ್ ಪ್ರತೀಕ್ಷಾಗೆ ಈ ಪ್ರಶಸ್ತಿಯನ್ನು ನೀಡಲಿದ್ದಾರೆ. ಪ್ರಶಸ್ತಿಯು ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.
