ಬಂಟ್ವಾಳ: ಸರಕಾರಿ ಪ್ರೌಢ ಶಾಲೆ ಗೋಳ್ತಮಜಲು ಕಲ್ಲಡ್ಕ ಇದರ ಶಾಲಾ ವಾರ್ಷಿಕ ಕೋತ್ಸವ ಮತ್ತು ” ಬೆಳ್ಳಿ ಹಬ್ಬ 2020 ” ವರ್ಷದ ಉದ್ಘಾಟಿನಾ ಕಾರ್ಯಕ್ರಮ ನಡೆಯಿತು.ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರತ್ನಾವತಿ ಅವರು ಶಾಲಾ ವಾರ್ಷಿಕೋತ್ಸವ ಹಾಗೂ ಈ ಶಾಲೆ ಬೆಳ್ಳಿ ಹಬ್ಬ ವರ್ಷ 2020 ರ ಲೊಗೋವನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆಪಾಠದ ಜೊತೆಗೆ ಶಿಸ್ತಿನ ಜೀವನದ ಪಾಠವನ್ನುಕಲಿಸಿಕೊಡುತ್ತದೆ. ಪೋಷಕರು ಅಂಕದ ಜೊತೆಗೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆಯೂ ಚಿಂತನೆ ನಡೆಸಬೇಕು ಎಂದರು.
ಉತ್ತಮ ಶಿಕ್ಷಣ ನೀಡುವ ಸರಕಾರಿ ಶಾಲೆಯ ಉಳಿವಿಗಾಗಿ ಗ್ರಾಮದ ಹಿರಿಯರ ಸೂಕ್ತ ಸಲಹೆ ಜೊತೆಗೆ ಪೋಷಕರ ಸಹಕಾರ ಅಗತ್ಯವಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ. ಸರಕಾರಿ ಶಾಲೆ ಉಳಿದು ಬೆಳೆಯಲು ಶಿಕ್ಷಕರು, ಎಸ್.ಡಿ.ಎಂ.ಸಿ.ಹಾಗೂ ಪೋಷಕರ ಸಹಭಾಗಿತ್ವದ ಪ್ರಾಮುಖ್ಯತೆಯು ಇದೆ
ಎಂದು ಹೇಳಿದರು.ಇಂತಹ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಭಾಗ್ಯವಂತರು.ಮುಚ್ಚುವ ಹಂತದಲ್ಲಿದ್ದ ಈ ಶಾಲೆಯನ್ನು ಪ್ರಗತಿಯ ಹಂತದಲ್ಲಿ ಮುನ್ನಡೆ ಸುವ , ಸರಕಾರದ ಸವಲತ್ತಿನ ಜೊತೆಗೆ ಸಂಘಸಂಸ್ಥೆಗಳು, ಗ್ರಾಮದ ಪ್ರಮುಖರು ಎಸ್.ಡಿ.ಎಂ. ಸೇರಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದುಹೇಳಿದರು. ಶಾಲಾ ಮಕ್ಕಳು ರಚಿಸಿದ ವಿಶೇಷ ವಾರ್ಷಿಕ ಸಂಚಿಕೆ “ಮಜಲ್ಮ್ ಣಿಹಾರ” ವನ್ನು ಶಾಲಾ ಕಾರ್ಯಧ್ಯಕ್ಷ ಚಂದ್ರಶೇಖರ್ ಅವರು ಬಿಡುಗಡೆ ಗೊಳಿಸಿದರು. ವೇದಿಕೆಯಲ್ಲಿ ಸ್ಥಳದಾನಿ ಯೂಸೂಫ್ ,ತಾ.ಪಂ.ಸದಸ್ಯ ಮಹಾಬಲ ಶೆಟ್ಟಿ, , ಗ್ರಾ.ಪಂ. ಸದಸ್ಯ ರಾದ ಮೋನಪ್ಪ ದೇವಸ್ಯ, ರಾಜೇಶ್ ಕೊಟ್ಟಾರಿ, ಜಯಶ್ರೀ, ಜಯಂತಿ, ಹಿರಿಯ ರಾದ ಸುಂದರ ಶೆಟ್ಟಿ, ನಾರಾಯಣ ಪೂಜಾರಿ, ಚಿ.ರಮೇಶ್, ನವೀನ್ ರಾಜ್ , ಸೀತಾರಾಮ ಮಾಸ್ಟರ್, ಶಾಲಾಭಿವೃದ್ದಿ ಸದಸ್ಯ ರಾದ ಕೃಷ್ಣಪ್ಪ ಪೂಜಾರಿ , ನಾಗೇಶ್ ಪೂಜಾರಿ ನೆಕ್ಕರಾಜೆ, ನಾರಾಯಣ, ಮುಖ್ಯೋಪಾಧ್ಯಾಯಿನಿ ಸುಜಾತ ಕಲ್ಲಡ್ಕ ರೈತ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕಿ ವಿಜಯ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಸುಜಾತ ವಾರ್ಷಿಕ ವರದಿ ವಾಚಿಸಿದರು.
ಕಾರ್ಯಧ್ಯಕ್ಷ ಚಂದ್ರಶೇಖರ್ ಸ್ವಾಗತಿಸಿದರು. ನಳಿನಿ ವಂದಿಸಿದರು.ಶಿಕ್ಷಕ ಶಂಕರ್ ಕಾರ್ಯಕ್ರಮ ನಿರೂಪಿಸಿದರು.ನಂತರ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

