ಫರಂಗಿಪೇಟೆ : ಅನುದಾನಿತ ಶ್ರೀ ರಾಮ ಶಾಲೆ ಕಟ್ಟಡಕ್ಕೆ ಎಂಆರ್ ಪಿ ಎಲ್ ನಿಂದ ಅನುದಾನಕ್ಕೆ ಶಿಪಾರಸು ಮಾಡಿದ್ದೇನೆ ಆದಷ್ಟು ಶೀಘ್ರವಾಗಿ ಒದಗಿಸಲು ಶ್ರಮಿಸುತ್ತೇನೆ , ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿ ಮತ್ತು ಏಳಿಗೆ ನಮ್ಮ ಕರ್ತವ್ಯ ಎಂದು ದಕ್ಷಿಣ ಕನ್ನಡ ಸಂಸದ ಹಾಗು ಬಿ ಜೆ ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಶ್ರೀ ರಾಮಾ ವಿದ್ಯಾ ಸಂಸ್ಥೆ ಯಾ ಆಡಳಿತ ದಲ್ಲಿರುವ ಅನುದಾನಿತ ಶ್ರೀರಾಮಾ ಹಿರಿಯ ಪ್ರಾರ್ಥಮಿಕ ಶಾಲೆ , ಶ್ರೀ ರಾಮಾ ಪ್ರೌಢ ಶಾಲೆ , ಹಾಗು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಗಳ ವಾರ್ಷಿಕೋತ್ಸವ ಹಾಗು ಪೋಷಕರ ದಿನಾಚರಣೆ ಸಮಾರೋಪ ಸಮಾರಂಭ .
ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡಿದರು , ಈ ಸಂದರ್ಭ ದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ವಜ್ರನಾಭ ಶೆಟ್ಟಿ ಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು , ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಎ ಕೆ ಜಯರಾಮ್ ಶೇಕ , , , ಉದ್ಯಮಿಗಳಾದ ಝಫ್ರುಲ್ಲಾ ಒಡೆಯರ್ ಅರ್ಕುಳ , ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ , ಪ್ರದೀಪ್ ಶೆಟ್ಟಿ ಅಡ್ಯಾರ್ , ಮುಖ್ಯ ಶಿಕ್ಷಕರಾದ ಶೈಲಜಾ , , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮನೋಹರ ಶೆಟ್ಟಿ ಕಲ್ಲತಡಮೆ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸಂತೋಷ್ ಅರ್ಕುಳ , ಸುಕುಮಾರ್ ಧರ್ಮಗಿರಿ , ಮತ್ತಿತರರು ಉಪಸ್ಥಿತರಿದ್ದರು . ದೇವದಾಸ್ ಕೆ ಆರ್ ರವರು ಸ್ವಾಗತಿಸಿದರು , ಶಾಲಾ ಸಂಚಾಲಕರಾದ ಗೋವಿಂದ ಶೆಣೈ ರವರು ವಂದಿಸಿದರು . ಶಿಕ್ಷಕಿ ಭುವನೇಶ್ವರಿ ಶೆಟ್ಟಿ ಯವರು ನಿರೂಪಿಸಿದರು
