ರಾಷ್ಟ್ರೀಯ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನಿವಾಸಿ ಆಟಗಾರ ಶೌಕತ್ ಅಲಿ

ಬಂಟ್ವಾಳ : ಬೆಂಗಳೂರಿನ ಮೋದಿ ಹಾಸ್ಪಿಟಲ್ ರಸ್ತೆಯ ರಾಜಾಜಿ ನಗರ ಶಂಕರಮಠ ಸ್ವಾಮಿ ವಿವೇಕಾನಂದ ಮೈದಾನದಲ್ಲಿ ಇತ್ತೀಚೆಗೆ ನಡೆದ ವಾಜಪೇಯಿ ಕಪ್ ರಾಷ್ಟ್ರೀಯ ಮಟ್ಟದ ಸೌತ್ ಝೋನ್ ಯೂತ್ ನ್ಯಾಷನಲ್ಸ್ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

27bntph9

ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಮಣಿಸಿದ ತಮಿಳ್ನಾಡು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಸಚಿವ ಸುರೇಶ್ ಕುಮಾರ್ ಪಂದ್ಯಾಟ ಉದ್ಘಾಟಿಸಿದರು. ಡಿ 21 ರಿಂದ 25ರವೆಗೆ ನಡೆದ ಈ ಕೂಟದಲ್ಲಿ ತೆಲಂಗಾಣ, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತಮಿಳ್ನಾಡು, ಪಾಂಡಿಚೇರಿ ಈ ಆರು ರಾಜ್ಯಗಳ ತಂಡಗಳು ಪಾಲ್ಗೊಂಡಿದ್ದವು.

27bntph10
ಕರ್ನಾಟಕ ರಾಜ್ಯ ತಂಡದಲ್ಲಿ ರಾಕೇಶ್ ಚಿಕ್ಕಮಗಳೂರು, ನಿಖಿಲಾ ಶೃಂಗೇರಿ, ಶಿವು ಶಿವಮೊಗ್ಗ, ಮನು ಮಂಗಳೂರು, ಗಗನ್ ಮಂಗಳೂರು, ವೀರ ಬಜಗೋಳಿ, ತರುಣ್ ಹಾಸನ, ಶೌಕತ್ ಪಾಣೆಮಂಗಳೂರು, ಅಮಲ್ ಬೆಂಗಳೂರು, ಪುಣೀತ್ ಬೆಂಗಳೂರು, ದರ್ಶನ್ ಬೆಂಗಳೂರು, ರೋಹಿತ್ ಬೆಂಗಳೂರು ಈ 12 ಮಂದಿ ಆಟಗಾರರು ಪ್ರದರ್ಶನ ನೀಡಿದ್ದರು. ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನಿವಾಸಿ ಆಟಗಾರ ಶೌಕತ್ ಅಲಿ ರಾಷ್ಟ್ರೀಯ ತಂಡದಲ್ಲಿ ಭಾಗವಹಿಸುವ ಅವಕಾಶ ಪಡೆದು ಉತ್ತಮ ಪ್ರದರ್ಶನ ನೀಡಿರುತ್ತಾರೆ.
ಕರ್ನಾಟಕ ತಂಡಕ್ಕೆ ನಾಗೇಶ್ ಬೆಂಗಳೂರು ತರಬೇತುದಾರರಾಗಿದ್ದರೆ, ನಯನ್ ಮಂಗಳೂರು ವ್ಯವಸ್ಥಾಕರಾಗಿ ಕಾರ್ಯನಿರ್ವಹಿಸಿದ್ದರು.

By suddi9

Leave a Reply

Your email address will not be published. Required fields are marked *