ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಕೈಕಂಬ ಬಳಿ ಗುರುವಾರ ಸಂಜೆ ಸುಮಾರು ರಾತ್ರಿ 7 ಗಂಟೆಗೆ ಅನುಮತಿ ಪಡೆಯದೆ ಪ್ರತಭಟನೆ ನಡೆಸಿದ ಪಿಎಫ್ಐ, ಸಿಎಫ್ಐ,ಎಸ್ ಡಿ ಪಿ ಐ, ಕಾರ್ಯಕರ್ತರನ್ನು ಬಂಟ್ವಾಳ ನಗರ ಪೊಲೀಸರು ಲಾಠಿಚಾರ್ಜ್ ನಡೆಸಿ ಚದುರಿಸಿದ ಘಟನೆ ನಡೆದಿದೆ. . ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ. ಫಾಹಿದ್ ಫರ್ಲಿಯಾ ಎಸ್ ಡಿ ಪಿ ಐನ ಇಸಾಕ್ ಶಾಂತಿ ಅಂಗಡಿ , ನೌಶೀರ್ ಯಾನೆ ನೌಚಿ ಶಾಂತಿಅಂಗಡಿ, ಅಶ್ರಫ್ ಬಿ ಮೂಡ ಸೇರಿದಂತೆ ಸುಮಾರು 30 ಮಂದಿ ಯಾವುದೇ ಅನುಮತಿ ಪಡೆಯದೇ ಧ್ವನಿವರ್ಧಕವನ್ನು ಬಳಸಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ರೀತಿ ಅಕ್ರಮ ಕೂಟ ಸೇರಿ ಪ್ರತಿಭಟನೆ ನಡೆಸುತ್ತಿದ್ದರು, ಈಬಗ್ಗೆ ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾನೂನು ಉಲ್ಲಂಘನೆಯ ಬಗ್ಗೆ ತಿಳಿಹೇಳಿದ ಹೊರತಾಗಿಯೂ ಅಕ್ರಮ ಕೂಟ ಸೇರಿ ಪ್ರತಿಭಟನೆ ಮುಂದುವರಿಸಿದಾಗ ಪೊಲೀಸರು ಲಾಠಿಚಾಜ್೯ ಮಾಡಿ ಪ್ರತಿಭಟನಾ ಕಾರರನ್ನು ಚದುರಿಸಿದರು.ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.ಮುಂಜಾಗ್ಋತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
