ಬಂಟ್ವಾಳ;ಕ್ಷುಲ್ಲಕ ವಿಚಾರಕ್ಕೆ ಅಣ್ಣ ತಮ್ಮಂದಿರ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಪರ್ಯಾವಸನಗೊಂಡ ಘಟನೆ ಪಾಣೆಮಂಗಳೂರು ಸಮೀಪದ ಬೋಳಂಗಡಿ ಎಂಬಲ್ಲಿ ಗುರುವಾರನಡೆದಿದೆ.
ಪಾಣೆಮಂಗಳೂರು ಗ್ರಾಮದ ಬೋಳಂಗಡಿ ನಿವಾಸಿ ಮುಯ್ಯ ಯಾನೆ ಲಿಯೋ ಲೋಬೊ( 50)  ಕೊಲೆಯಾದವರು.

IMG-20191226-WA0189
ಇವರ  ಅಣ್ಣ ಕಿಲ್ಲೆ ಯಾನೆ ಸಿರಿಲ್ ಲೋಬೊ ಅವರು ಆರೋಪಿಯಾಗಿದ್ದಾನೆ. ಬೆಳಿಗ್ಗೆ ಸುಮಾರು ಹತ್ತು ಗಂಟೆಯ ವೇಳೆಗೆ  ಮನೆಯಲ್ಲಿದ್ದ  ಅಣ್ಣ ತಮ್ಮಂದಿರಿಬ್ಬರು ಹಣದ ವಿಚಾರದಲ್ಲಿ ದೊಣ್ಣೆಯಲ್ಲಿ ಹೊಡೆದಾಡಿಕೊಂಡಿದ್ದು,ಅಣ್ಣ ಸಿರಿಲ್ನ ದೊಣ್ಣೆಯಬಲವಾದ ಏಟಿಗೆ ತಮ್ನ ಲಿಯೋ  ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಅಣ್ಣ ತಮ್ಮಂದಿರಿಬ್ಬರು ಅವಿವಾಹಿತರಾಗಿದ್ದು,ಇಬ್ಬರೇ ವಾಸವಿದ್ದು, ಪ್ರತಿನಿತ್ಯವೂ ಅಮಲುಪದಾರ್ಥ ಸೇವಿಸಿ ಪರಸ್ಪರ ಜಗಳವಾಡಿಕೊಳ್ಳುತ್ತಿದ್ದರೆಂದು  ಸ್ಥಳೀಯರು ತಿಳಿಸಿದ್ದಾರೆ.
ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ , ನಗರ ಠಾಣಾ ಎಸ್. ಐ.ಅವಿನಾಶ್ ಮತ್ತವರ ಸಿಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಈಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ   ಪ್ರಕರಣ ದಾಖಲಾಗಿದ್ದು,ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

 

By Suddi9

Leave a Reply

Your email address will not be published. Required fields are marked *