ಬಂಟ್ವಾಳ : ತಾಲೂಕಿನ ಸಿದ್ದಕಟ್ಟೆಯ  ಸಂಗಬೆಟ್ಟುವಿನಲ್ಲಿರುವ  ಶ್ರೀ ವೀರಭದ್ರ ಮಹಾಮ್ಮಾಯಿ  ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಒಳಗಿದ್ದ ಕಾಣಿಕೆ ಡಬ್ಬಿ ಕದ್ದೊಯ್ದಿರುವ ಘಟನೆ ಸಂಭವಿಸಿದ್ದು,ಈ ದೃಶ್ಯ ದೇವಸ್ಥಾನದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
2612pktG1B
ಗುರುವಾರ ನುಸುಕಿನ ಜಾವ 2.30ರ ವೇಳೆಈ  ಘಟನೆ ನಡೆದಿದೆ.ಇಬ್ಬರು ವ್ಯಕ್ತಿಗಳು ದೇವಸ್ಥಾನದ ಒಳಗೆ ನುಗ್ಗಿರುವ ಚಿತ್ರ ಸಿ.ಸಿ.ಕ್ಯಾಮಾರದಲ್ಲಿ ಸೆರೆಯಾಗಿದೆ.
ಕಳ್ಳರು ಶ್ರೀವೀರಭದ್ರ ದೇವಸ್ಥಾನದ ಮುಂಬಾಗಿಲ ಬೀಗ ಮುರಿದು  ಒಳಪ್ರವೇಶಿಸಿದ ಕಳ್ಳರು ಗರ್ಭಗುಡಿಯ ಒಳ ನುಗ್ಗಲು ವಿಫಲರಾದ ಬಳಿಕ ಕಾಣಿಕೆ ಡಬ್ಬಿಯನ್ನು ಎಬ್ಬಿಸಿ ಹೊರಕ್ಕೆಓಯ್ದು ಹಣ ತೆಗೆದು ಡಬ್ಬಿಯನ್ನು ಬಿಸಾಕಿದ್ದಾರೆ.
2612pktG1
  ಹಾಗೆಯೇ  ಮಹಮ್ಮಾಯಿ ದೇವಸ್ಥಾನದ ಹಂಚು ತೆಗೆದು ಒಳ ಪ್ರವೇಶಿಸಿದ ಕಳ್ಳರು ಅಲ್ಲೂ ಗರ್ಭಗುಡಿಯ ಒಳ ಪ್ರವೇಶಕ್ಕೆ ವಿಫಲರಾದ ಕಳ್ಳರು ಅಲ್ಲಿದ್ದ   ದೊಡ್ಡ  ಕಾಣಿಕೆ ಡಬ್ಬಿಯನ್ನು ಹೊತ್ತೊಯ್ದಿದ್ದಾರೆ.
ಬೆಳಗ್ಗೆ ದೇವಳದ ಅರ್ಚಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.ಮಾಹಿತಿ ಪಡೆದ ದೇವಳದ ಗುರಿಕಾರರು  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್,  ಬಂಟ್ವಾಳ ಗ್ರಾಮಾಂತರ ಎಸ್..ಐ. ಪ್ರಸನ್ನ ಮತ್ತವರ ಸಿಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.  ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಸುಮಾರು 10 ಸಾವಿರ ರೂ.ನಗದು ಕಳವಾಗಿರಬೇಕೆಂದು ಅಂದಾಜಿಸಲಾಗಿದೆ. ಚಂದ್ರಹಾಸ ಗುರಿಕಾರರ ದೂರನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
2612pktG1A
ಶ್ರೀ ವೀರಭದ್ರ ಹಾಗೂ ಮಹಾಮ್ಮಾಯಿ ದೇವಸ್ಥಾನದ ನವೀಕರಣ ಗೊಂಡು ಇತ್ತೀಚಿಗೆ ಪುನಃಪ್ರತಿಷ್ಠೆ ,ಬ್ರಹ್ಮಕಲಶೋತ್ಸವ ನಡೆದಿತ್ತು.‌
ಮಂದಿರದಲ್ಲು ಕಳವು : ಇದೇ ವೇಳೆ ರಾಯಿ ಬ್ರಹ್ಮಶ್ರೀ ನಾರಾಯಣಗುರು ಮಂದಿರಕ್ಕು ಕಳ್ಳರು ಲಗ್ಗೆ ಇಟ್ಟಿದ್ದು,ಇಲ್ಲು ಎರಡು ಕಾಣಿಕೆ ಡಬ್ಬಿಯನ್ನು ಎಗರಿಸಿ ಪರಾರಿಯಾಗಿದ್ದಾರೆ.ಮಂದಿರದ ಹೆಬ್ಬಾಗಿಲನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಕಾಣಿಕೆ ಡಬ್ಬಿ ಯನ್ನು ಚಿಲಕವನ್ನು ಮುರಿದು ಅದರಲ್ಲಿದ್ದ ನಗದು ಹಣವನ್ನು ಎಗರಿಸಲಾಗಿದೆ.ಸುಮಾರು 10 ಸಾ.ರೂ.ನಗದು ಕಳವಾಗಿರಬಹುದೆಂದು ಅಂದಾಜಿಸಲಾಗಿದೆ.ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

By Suddi9

Leave a Reply

Your email address will not be published. Required fields are marked *