ಬಂಟ್ವಾಳ : ತಾಲೂಕಿನ ಇರಾ ಗ್ರಾ.ಪಂ.ಅಧ್ಯಕ್ಷ ರಝಾಕ್ ಕುಕ್ಕಾಜೆ ಅವರ ಕೊಲೆ ಯತ್ನಕ್ಕೆ ಅವರ ಖಾಸ ಅಣ್ಣನೇ ಸಂಚು ರೂಪಿಸಿರುವ ಅಂಶ ಮಾಹಿತಿ ಪೊಲೀಸರ ತನಿಖೆಯಲ್ಲಿ ಬಯಲಿಗೆ ಬಂದಿದೆ. ಎರಡು ದಿನಗಳ ಹಿಂದೆ ಬಂಧಿತರಾಗಿದ್ದ ಮಂಚಿ ನಿವಾಸಿಗಳಾದ ಬಶೀರ್, ಕಬೀರ್ , ತನ್ವಿರ್ ಎಂಬವರ ವಿಚಾರಣೆಯ ವೇಳೆ ಆರೋಪಿಗಳು ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತ ಆರೋಪಿಗಳುನೀಡಿದ ಸುಳಿವಿನನ್ವಯ ಗಾಯಾಳು ರಜಾಕ್ ಅವರ ಖಾಸ ಅಣ್ಣಕುಂಜುಮೋನು ಹಾಗೂ ಮಸೀದಿ ಮಾಜಿ ಆದ್ಯಕ್ಷ ತೋಟ ಅಬುಬಕ್ಕರ್ ಎಂಬವರನ್ನು ಶನಿವಾರ ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 5ಕ್ಕೇರಿದೆ. ನ. 30ರಂದು ಮಂಚಿ ಕಟ್ಟೆಯ ಬಳಿ ಇರಾ ಗ್ರಾಮ ಪಂಚಾಯತಿ ಅಧ್ಯಕ್ಷ ರಜಾಕ್ ರವರ ಕೊಲೆಯತ್ನ ನಡೆದಿತ್ತು.
.ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ಮಾರ್ಗದರ್ಶನ ದಲ್ಲಿ ಗ್ರಾಮಾಂತರ ಪೋಲೀಸ್ ಠಾಣಾ ಎಸ್. ಐ.ಪ್ರಸನ್ನ ಮತ್ತವರ ಸಿಬಂದಿಗಳು ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ದ್ದಾರೆ. ಬಂಧಿತ ಇಬ್ಬರು ಆರೋಪೊಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
