ಕಟೀಲು: ಭಕ್ತಿ-ಭಾವುಕತೆ, ತ್ಯಾಗ-ಸಾಮರಸ್ಯದಿಂ ದ1ಗುಮಾನ-ಅಡಂಬರಗಳಿಲ್ಲ ದೆ ಸಾವಿರ ಸಾವಿರ ಮಂದಿಯ ಉಚಿತ ಶ್ರಮ ದಾನ * ಕರಸೇವೆ, ಧರ್ಮ ಜಾಗೃತಿಯ ಕಾರ್ಯಗಳು, ಸಮಾಜ ದ ಸಮಗ್ರ ಪ್ರಗತಿಯ ಸಂಕೇತವಾಗಿ ಕಟೀಲುಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳುತ್ತಿರುವು ದು ಉತ್ತಮ ಸಂಕೇತ. ಕ್ಷೇತ್ರಕ್ಕೆ ಆಗಮಿಸಲಿರುವ ವಿಶ್ವ ದೆಲ್ಲೆಡೆಯ ಲಕ್ಷಾಂತರ ಭಕ್ತರಿಗೂ ಯಾವು ದೇ ರೀತಿ ಕೊರತೆಗಳು ಬಾಧಿಸ ದಂತೆ ದೇಗುಲ ದ ಆಡಳಿತ, ಸರಕಾರ ಹಾಗೂ ಸ್ಥಳೀಯ ಸಾರ್ವಜ ನಿಕರ ಸಹಕಾರದಿಂ ದ ಯಶಸ್ವಿಯಾಗಿ ಸಂಪನ್ನಗೊಳ್ಳಲಿ ದೆ ಎಂ ದು ಶಾಸಕ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಉಮಾನಾಥ ಕೋಟ್ಯಾನ್ ಅವರು ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ದಲ್ಲಿ ಡಿ.15ರಂ ದು ನಡೆಯಲಿರುವ ಋಕ್ಸಂಹಿತಾ ಯಾಗ ಹಾಗೂ ಮೂಲ ಸಾನ್ನಿಧ್ಯ, ಭ್ರಾಮರೀ ವನ (ಕು ದ್ರು) ದಲ್ಲಿ ನಡೆಯಲಿರುವ ಕೋಟಿ ಜಪಯಜ್ಞಗಳ ಹಿನ್ನೆಲೆಯಲ್ಲಿ ಭ್ರಾಮರೀವನದಲ್ಲಿ ಜರಗಿದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಾಣಿಲ ಶ್ರೀ ಮೋಹನ ದಾಸ ಸ್ವಾಮಿ ಅವರು ಮಾತನಾಡಿ ಸಮಸ್ತರ ಏಳಿಗೆ ಹಾಗೂ ಸುಭಿಕ್ಷೆಗಾಗಿ ಎಲ್ಲರೂ ಧರ್ಮ ಜಾಗೃತಿಯ ಕಾರ್ಯ ದಲ್ಲಿ ಪಾಲ್ಗೊಳ್ಳುವು ದು ಶುಭಸೂಚಕ. ಮನೆ-ಮನಗಳಲ್ಲಿ ಕೋಟಿ ಜಪ ನಡೆಸುವು ದರೊಂದಿಗೆಸಮಗ್ರ ನಾಡಿನ ಏಳಿಗೆಯ ಉಪಾಸನೆ ಅರ್ಥಪೂರ್ಣ ಎಂದರು. ದೇವಳ ದ ಅರ್ಚಕ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಶ್ರೀಹರಿನಾರಾಯಣ ದಾಸ ಅಸ್ರಣ್ಣ ಅವರು ಋಕ್ಸಂಹಿತಾಯಾಗ ಹಾಗೂ ಕೋಟಿ ಜಪಯಜ್ಞ ದ ಪ್ರಕ್ರಿಯೆಗಳು ಹಾಗೂವ್ಯವಸ್ಥೆಗಳ ಬಗ್ಗೆ ವಿವರಿಸಿ ದರು.
ದೇವಳ ದ ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರ ವಾಸು ದೇವ ಅಸ್ರಣ್ಣ, ಆಡಳಿತ ಸಮಿತಿಯ ಅಧ್ಯಕ್ಷ ಹಾಗೂ ಅನುವಂಶಿಕ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಅರ್ಚಕ ಹಾಗೂ ಕೋಟಿ ಜಪಯಜ್ಞ ದ
ಸಮಿತಿಯ ಗೌರವಾಧ್ಯಕ್ಷ ಕಮಲಾ ದೇವಿ ಅಸ್ರಣ್ಣ, ವೆಂಕಟರಮಣ ಅಸ್ರಣ್ಣ, ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಸುಧೀರ್ ಶೆಟ್ಟಿ ಕೊಡೆತ್ತೂರುಗುತ್ತು, ಜಪಯಜ್ಞ ಸಮಿತಿಯ ಕಾರ್ಯದರ್ಶಿ ಗಿರಿಧರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಈಶ್ವರ ಕಟೀಲು, ಸ್ವಾಗತ ಸಮಿತಿಯ ಕಾರ್ಯ ದರ್ಶಿ ಭಾಸ್ಕರ ದೇವಸ್ಯ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಜಾಗ ಖರೀದಿಗೆ ಸಹಕಾರ:
ಬಂಟ್ವಾಳ ತಾಲೂಕಿನ ಸಮಸ್ತ ದಾ ನಿಗಳ ಸಹಕಾರದಿಂದ ಕಟೀಲು ದೇಗುಲಕ್ಕೆ ಸಂಬಂಧಿಸಿ ಜಾಗದ ಕೊರತೆಯನ್ನು ನೀಗಿಸಲು ಜಾಗ ಖರೀದಿಯ ವ್ಯವಸ್ಥೆಗೆ ನಿಧಿಯೊಂದನ್ನು ಸಮರ್ಪಿಸಲು ಉದ್ಶಿದೇಶಿಸಲಾಗಿ ದೆ. ಜಿಲ್ಲೆಯ ಸಮಸ್ತ
ಸದ್ಭಕ್ತರು ಕ್ಷೇತ್ರಾಭಿಮಾನಿಗಳೂ ಈ ಅಂಶಕ್ಕೆ ಒತ್ತು ನೀಡಬೇಕು ಎಂದು ಮಾಣಿಲ ಶ್ರೀ ಮೋಹನ ದಾಸ ಸ್ವಾಮೀಜಿ ಸುದ್ಧಿಗೋಷ್ಠಿಯಲ್ಲಿ ತಿಳಿಸಿ ದರು.
ಅರಣೀ ಮಥನ ದ ಮೂಲಕ ಉತ3ತ್ತಿ ಮಾಡಿ ದ ಅಗ್ನಿಯಿಂದಲೇ ಇಂದು ಶನಿವಾರ ನಡೆಯಲಿರುವ ದುರ್ಗಾಹೋಮ, ಗಣಹೋಮ, ಮೃತ್ಯುಂಜಯ ಹೋಮ, ನವಗ್ರಹ ಹೋಮ ಹಾಗೂ ಭಾನುವಾರ ನಡೆಯಲಿರುವ ಋಕ್ಸಂಹಿತಾ ಯಾಗಗಳು ನೆರವೇರಲಿವೆ. ಕೋಟಿ ಜಪಯಜ್ಞಕ್ಕೆ ನೋಂ ದಣಿ ಹಾಗೂ ಸಂಕಲ್ಪ ಅವರವರ ಸಮೀಪ ದ ಕ್ಷೇತ್ರಗಳಲ್ಲೂ ಮಾಡಬಹುದು. ಆದರೆ ಬ್ರಹ್ಮರ್ಪನೆಯೊಂದಿಗೆ ಪ್ರಸಾದ ಸ್ವೀಕರಿಸಿ ವ್ರತ ಸಮರ್ಪಣೆಗೆ ಕಟೀಲು ಕ್ಷೇತ್ರಕ್ಕೆ ಆಗಮಿಸ ಬೇಕು. ಹಾಗೂ 2020ರ ಜನವರಿ 22ರವರೆಗೂ ಕಟೀಲಿನಲ್ಲಿ ಬೆಳಿಗ್ಗೆ ಹಾಗೂ ಮಧ್ಯಾಹ್ನ 2 ಅವಧಿಯಲ್ಲಿ ಸಂಕಲ3 ದೀಕ್ಷೆಗೆ ಅವಕಾಶವಿದ್ದು ಕನಿಷ್ಠ 12 ದಿನ ವ್ರತ ಪೂರೈಸುವು ದು ಕಡ್ಡಾಯ.
