ಬಂಟ್ವಾಳ: ರಾಜ್ಯದ 15 ವಿಧಾನ ಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ 12 ಸ್ಥಾನಗಳಲ್ಲಿ  ಬಿ.ಜೆ.ಪಿ. ಭರ್ಜರಿ ಜಯಗಳಿಸಿರುವ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಪೇಟಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ತಾಪಂ ಸದಸ್ಯ ಪ್ರಭಾಕರ ಪ್ರಭು ಅವರು, ರಾಜ್ಯದ ಜನತೆ ಸಿಎಂ ಬಿ.ಎಸ್ .ಯಡಿಯೂರಪ್ಪ ನೇತೃತ್ವದಲ್ಲಿ ಸುಭದ್ರ ಸರಕಾರವನ್ನು ಬಯಸಿದ್ದು,ಜನತೆಯ ಆಶಯದಂತೆ ಮುಂದಿನದಿನದಲ್ಲಿ  ಕರ್ನಾಟಕ ರಾಜ್ಯದಲ್ಲಿ ಅಭಿವೃಧ್ದಿಯ ಶಕೆ ಆರಂಭವಾಗಲಿದೆ ಎಂದರು. ಇದೇ ವೇಳೆ  ಪಕ್ಷದ ಮುಖಂಡರಾದ ರತ್ನಕುಮಾರ್ ಚೌಟ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ,ಸಿಹಿ ಹಂಚಿ ,ಪಕ್ಷದ  ಧ್ವಜ ಹಿಡಿದು ವಿಜಯೊತ್ಸವದ ಸಂಭ್ರಮ ಆಚರಿಸಿದರು..
IMG-20191209-WA0033
IMG-20191209-WA0034
ಸಂಗಬೆಟ್ಟು ಗ್ರಾ.ಪಂಚಾಯತ್  ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ,ಪಂಚಾಯತ್ ಸದಸ್ಯ ರಾದ ಮಾಧವ ಶೆಟ್ಟಿಗಾರ್, ಎಸ್.ಪಿ.ಶ್ರೀದರ್.,ಸುರೇಶ್ ಕುಲಾಲ್, ಪಕ್ಷದ ಪ್ರಮುಖರಾದ ಉಮೇಶ್ ಗೌಡ ಮಂಚಕಲ್ಲು,ಮಹೇಶ್ ಗೌಡ,ಸಂದೇಶ್ ಹೊಕ್ಕಾಡಿಗೊಳಿ, ಅಜಯ್ ಹಲಾಯಿ ಕುಕ್ಕಿಪಾಡಿ, ಬೂಬ ಶೆಟ್ಟಿಗಾರ್ ಮೊದಲಾದರಿದ್ದರು

By suddi9

Leave a Reply

Your email address will not be published. Required fields are marked *