ಬಂಟ್ವಾಳ: ಇಲ್ಲಿನ ಎಸ್ ವಿ ಎಸ್ ಕಾಲೇಜಿನ ರಾ.ಸೇ.ಯೋ.ಯ ವಾರ್ಷಿಕ ಶಿಬಿರ ಸರಪಾಡಿ ಹಿ.ಪ್ರಾ.ಶಾಲೆಯಲ್ಲಿ ನಡೆಯುತ್ತಿದ್ದು, ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಶಿಬಿರಕ್ಕೆ ಭೇಟಿ ನೀಡಿ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ಸಾಧನೆ ಮಾಡುವುದಕ್ಕೆ ಪಠ್ಯೇತರ ಚಟುವಟಿಕೆಯಲ್ಲಿ ಸಾಕಷ್ಟು ಅವಕಾಶಗಳಿದ್ದು,
ಇಚ್ಚೆಯ ಕ್ಷೇತ್ರಗಳಲ್ಲಿ ಮುಂದುವರಿಯಬಹುದಾಗಿದೆ ಎಂದು ತನ್ಬ ಕಾಲೇಜ್ ದಿನಗಳ ಕ್ರೀಡಾ ಕ್ಷೇತ್ರದ ಚಟುವಟಿಕೆಯ ಬಗ್ಗೆ ಶಾಸಕರು ಮಾಹಿತಿ ನೀಡಿದರು. ದಂತ ವೈದ್ಯ ಡಾ.ಬಾಲಚಂದ್ರ ಶೆಟ್ಟಿ ಅವರು ದಂತ ಚಿಕಿತ್ಸೆ ಹಾಗೂ ಆರೋಗ್ಯದ ಕುರಿತಾಗಿ ಮಾಹಿತಿ ನೀಡಿದರು. ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಪ್ರಧಾನ ಆರ್ಚಕ ಶಂಕರನಾರಾಯಣ ಹೊಳ್ಳ,ಉದ್ಯಮಿ ಸತೀಶ್ ಪೈ ಸರಪಾಡಿ,ಕುಸುಮಾಕರ ಶೆಟ್ಟಿ ಕುರಿಯಾಳ,ದಿನೇಶ್ ಗೌಡ ನೀರೊಲ್ಪೆ,ಸಾಂತಪ್ಪಪೂಜಾರಿ,ಗಿರಿಧರ ಎಸ್.ಶಿಬಿರಾಧಿಕಾರಿಗಳಾದ ಮಂಜುನಾಥ ಉಡುಪ,ಶಶಿಕಲಾ ಎಂ.ಪಿ. ಮೊದಲಾದವರಿದ್ದರು.
