ಕುಪ್ಪೆಪದವು :ತ್ಯಾಜ್ಯ ನಿರ್ವಹಣೆಯಲ್ಲಿ, ವಿಫಲವಾಗಿದೆ, ಎಂಬ ಕಾರಣಕ್ಕಾಗಿ, ಜಿಲ್ಲಾಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಂದ, ನೋಟೀಸು ಪಡೆದುಕೊಂಡಿದ್ದ, ಗಂಜಿಮಠ ಗ್ರಾಮ ಪಂಚಾಯತ್, ಈಗ, ಈ ಭಾಗದ ಇತರ ಪಂಚಾಯತ್ ಗಳಿಗಿಂತ, ಸ್ವಚ್ಛತೆಯಲ್ಲಿ ಒಂದು ಹೆಜ್ಜೆ ಮುಂದಿದೆ. ಗಂಜಿಮಠ ಪಂಚಾಯತ್ ವ್ಯಾಪ್ತಿಯ, ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ, ಸಾರ್ವಜನಿಕರು ಎಲ್ಲೆಂದರಲ್ಲಿ ತಂದು ಸುರುತ್ತಿದ್ದ ಕಸದ ರಾಶಿ ಯೇ, ಕಂಡು ಬರುತ್ತಿತ್ತು, ಇದನ್ನು ಈ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ, ಅಂದಿನ ಜಿಲ್ಲಾಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರುಗಮನಿಸಿ , ಸುಮಾರು ಒಂದು ವರ್ಷದ ಹಿಂದೆ ಪಂಚಾಯತ್ ಗೆ ನೋಟೀಸು ನೀಡಿದ್ದರು, ಆದರೆ ಇಂದು ಆ, ಚಿತ್ರಣ ಬದಲಾಗಿದೆ. ಈಗ ಪಂಚಾಯತ್, ತನ್ನ ವ್ಯಾಪ್ತಿಯ ಹೆಚ್ಚಿನ ಪ್ರದೇಶಗಳಲ್ಲಿ ಎರಡು ದಿನಕ್ಕೊಮೆ, ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿ, ಸಾಗಿಸುತ್ತಿದೆ.
ಸ್ಥಳೀಯರು ತಂದು ರಸ್ತೆ ಬದಿಯಲ್ಲಿ ಚೆಲ್ಲುತ್ತಿದ್ದ ಕಸದ ಜೊತೆಗೆ, ಪಂಚಾಯತ್ ವ್ಯಾಪ್ತಿಯಲ್ಲಿರುವ, ಗಂಜಿಮಠದ,ಕೈಗಾರಿಕಾ ಪ್ರದೇಶದಲ್ಲಿರುವ, ಕೈಗಾರಿಕೆಗಳಲ್ಲಿ,ದುಡಿಯುತ್ತಿರುವ, ಬಾಡಿಗೆ ಮನೆಗಳಲ್ಲಿ, ವಾಸವಾಗಿರುವ ಹೊರರಾಜ್ಯದ, ಕಾರ್ಮಿಕರು ಎಲ್ಲೆಂದರಲ್ಲಿ ಎಸೆಯುತ್ತಿದ್ದ ಕಸವನ್ನು ವಿಲೇವಾರಿ ಮಾಡುವುದೇ, ಪಂಚಾಯತ್ ಗೆ ದೊಡ್ಡ ಸಮಸ್ಯೆಯಾಗಿತ್ತು. ಈ ಸಂದರ್ಭ ದಲ್ಲಿ, ಮನೆ ಮನೆಗಳಿಂದ, ಕಸ ಸಂಗ್ರಹಿಸುವ, ಯೋಜನೆಯನ್ನು, ಪಂಚಾಯತ್ ಅನುಷ್ಠಾನಕ್ಕೆ ತಂದಿತ್ತು, ಇದು ಯಶಸ್ವಿಯಾದ ಕಾರಣದಿಂದಾಗಿ, ಪಂಚಾಯತ್ ವ್ಯಾಪ್ತಿಯ ರಸ್ತೆಬದಿಗಳು, ಯಾವಾಗಲೂ ಕಸ ರಾಶಿ ಬಿದ್ದು, ಕೊಳೆತು ನಾರುತ್ತಿದ್ದ ಮಾರುಕಟ್ಟೆಯ ಕಸ ಹಾಕುತ್ತಿದ್ದ ಪ್ರದೇಶವೂ ಸ್ವಚ್ಛವಾಗಲು ಸಾಧ್ಯವಾಗಿದೆ.
ಮನೆ, ಮನೆಯಿಂದ ಕಸ ಸಂಗ್ರಹಣೆ ಮತ್ತು ಸಾಗಾಟವನ್ನು ಖಾಸಾಗಿಯವರಿಗೆ ಗುತ್ತಿಗೆ ನೀಡಲಾಗಿದ್ದು, ಖಾಸಾಗಿಯಯರು ಎರಡು ದಿನಕ್ಕೊಮ್ಮೆ ಮನೆಗಳಿಂದ ಕಸಸಂಗ್ರಹಿಸಿ ವಿಲೇವಾರಿ ಮಾಡುತ್ತಾರೆ ಜೊತೆಗೆ ವಾರದ ಸಂತೆಯಂದು ಉತ್ಪಾದನೆಯಾಗುವ ಕಸವನ್ನೂ ವಿಲೇವಾರಿ ಮಾಡುತ್ತಾರೆ. ಖಾಸಾಗಿಯವರು ಪ್ರತೀ ಮನೆಯಿಂದ ತಿಂಗಳಿಗೆ ನೂರಂತೆ ಶುಲ್ಕ ಸಂಗ್ರಹಿಸಲು ಪಂಚಾಯತ್ ಒಪ್ಪಿಗೆ ನೀಡಿದೆ ಅಲ್ಲದೆ ಸಂತೆಗೆ ಬರುವ ವ್ಯಾಪಾರಿಗಳೂ ಶುಲ್ಕ ಪಾವತಿ ಮಾಡಬೇಕಾಗಿದೆ. ಹೀಗೆ ಸಂಗ್ರಹವಾಗುವ ಒಟ್ಟು ಮೊತ್ತ ಸಾಕಾಗದೆ ಇರುವುದರಿಂದ ಪಂಚಾಯತ್ ಹೆಚ್ಚುವರಿಯಾಗಿ ಸ್ವಲ್ಪ ಮೊತ್ತವನ್ನು ಪಾವತಿಸುತ್ತಿದೆ. ಪಂಚಾಯತ್ ನ ವ್ಯಾಪ್ತಿಯ ಗ್ರಾಮೀಣ ಪ್ರದೇಶವನ್ನು ಹೊರತು ಪಡಿಸಿ, ಉಳಿದಂತೆ ಎಲ್ಲಾ ಪ್ರದೇಶದ ಕಸವನ್ನು ವಾಹನದಲ್ಲಿ ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ, ಪಂಚಾಯತ್ ಗರಿಷ್ಠಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ.
ಯೋಜನೆ ಅನುಷ್ಠಾನ ಯಶಸ್ವಿ ಯಾಗಲು ಪ್ರಮುಖ ಪಾತ್ರವಹಿಸಿದವರು ಪಂಚಾಯತ್ ಉಪಾಧ್ಯಕ್ಷ ಆರ್ ಎಸ್ ಝಕೀರ್. ಪಂಚಾಯತ್ ಅಧ್ಯಕ್ಷೆ ಮಾಲತಿ, ಪಂಚಾಯತ್ ಸದಸ್ಯರು, ಪಿ ಡಿ ಓ ಮತ್ತು ಪಂ. ಸಿಬಂದಿಗಳ ಸಂಪೂರ್ಣ ಸಹಕಾರ ಮತ್ತು ಸಜ್ಜನ, ಎಲ್ಲರೊಂದಿಗೆ ಉತ್ತಮ ಭಾಂಧವ್ಯ ಹೊಂದಿರುವ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಝಕೀರ್ ಅವರ ಅವಿರತ ಶ್ರಮ ಸ್ವಚ್ಛತೆಯಲ್ಲಿ ಗಂಜಿಮಠ ಪಂಚಾಯತ್ ಇತರ ಪಂಚಾಯತ್ ಗಳಿಗೆ ಹೋಲಿಸಿದರೆ, ಒಂದು ಹೆಜ್ಜೆ ಮುಂದಿರಲು ಪ್ರಮುಖ ಕಾರಣ ಎಂಬುವುದನ್ನು ನಿರಾಕರುಸುವಂತಿಲ್ಲ.
ತ್ಯಾಜ್ಯ ರಾಶಿಯಾಗಿ ವಿಲೇವಾರಿಯಾಗದೆ ಸಾರ್ವನಿಕರಿಂದ ವ್ಯಕ್ತವಾಗುತ್ತಿದ್ದ ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿ, ಪಂಚಾಯತ್ ಅಧ್ಯಕರು, ಸರ್ವಸದಸ್ಯರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ, ನಮ್ಮ ಪಂಚಾಯತ್ ವ್ಯಾಪ್ತಿ ಸ್ವಚ್ಛವಾಗಿರಬೇಕೆಂದು ಪ್ರಾಮಾಣಿಕವಾಗಿ ಯೋಜನೆ ಕಾರ್ಯಗತ ಗೊಳಿಸಿದುದರಿಂದ, ಯಶಸ್ವಿಯಾಗಿದ್ದೇವೆ, ——ಆರ್ ಎಸ್ ಝಕೀರ್, ಉಪಾಧ್ಯಕ್ಷರು ಗಂಜಿಮಠ ಗ್ರಾಮ ಪಂಚಾಯತ್.

