ಬಂಟ್ವಾಳ: ತುಳುಕೂಟ ಬಂಟ್ವಾಳ ಆಶ್ರಯದಲ್ಲಿ ಬಿ.ಸಿ.ರೋಡಿನಲ್ಲಿ ಈಚೆಗೆ ನಡೆದ ತುಳು ಕಥೆ,ಕವನ ವಾಚನ  ಸ್ಪರ್ಧೆಯ ವಿಜೇತರಿಗೆ  ಭಾನುವಾರ ತುಳು ನೃತ್ಯ ಭಜನಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ        ಬಹುಮಾನವನ್ನು ವಿತರಿಸಲಾಯಿತು.
20191124_131258
ಮಾಣಿಲ  ಶ್ರೀಧಾಮದ ಶ್ರೀ ಮೋಹನದಾಸ  ಸ್ವಾಮೀಜಿ ವಿಜೇತರಿಗೆ ಬಹುಮಾನ ವಿತರಿಸಿದರು. ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್ , ನ್ಯಾಯವಾದಿ ಅಶ್ವನಿ ಕುಮಾರ್ ರೈ, ಉದ್ಯಮಿ ನಾಗೇಶ್ ಕುಲಾಲ್, ಕೋಶಾಧಿಕಾರಿ ಸುಭಾಶ್ಚಂದ್ರ, .  ತುಳುಕೂಟ ಕಾರ್ಯದರ್ಶಿ ಎಚ್.ಕೆ.ನಯನಾಡು ,ಭಜನಾ ಸಮಿತಿ ಸಂಚಾಲಕ ಮಂಜು ವಿಟ್ಲ , ಗೋಪಾಲ ಅಂಚನ್ ,ಗಣೇಶ್ ನಾಯಕ್ ಉಪಸ್ಥಿತರಿದ್ದರು.  ರಮೇಶ್ ನಾಯಕ್ ರಾಯಿ ಬಹುಮಾನಿತರ ಪಟ್ಟಿ ವಾಚಿಸಿದರು.
ವಿಜೇತರ ವಿವರ:
ತುಳು ಕಥಾ ಸ್ಪರ್ಧೆ: ರಿಷಿಕಾ ( ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು) ಪ್ರಥಮ, ಅನನ್ಯ (ಸರಕಾರಿ ಪ್ರೌಢಶಾಲೆ ಪಂಜಿಕಲ್ಲು) ದ್ವಿತೀಯ, ಸಮ್ಯಕ್ ಜೈನ್ ( ಎಸ್ ವಿ ಎಸ್ ಆಂಗ್ಲಮಾಧ್ಯಮ ಶಾಲೆ ವಿದ್ಯಾಗಿರಿ) ಮತ್ತು ಆಕೃತಿ ( ಸರಕಾರಿ ಪ್ರೌಢಶಾಲೆ ಬಿಳಿಯೂರು) ತೃತೀಯ ಬಹುಮಾನ ಪಡೆದಿದ್ದಾರೆ.
ತುಳು ಹಾಡು ಹೇಳುವ ಸ್ಪರ್ಧೆ: 
ದೀಕ್ಷಿತ್ ( ಸರಕಾರಿ ಪ್ರೌಢಶಾಲೆ ಬೆಂಜನಪದವು) ಪ್ರಥಮ, ವೈಷ್ಣವಿ ( ಎಸ್ ಎಲ್ ಎನ್ ಪಿ ವಿದ್ಯಾಲಯ ಪಾಣೆಮಂಗಳೂರು) ದ್ವಿತೀಯ, ದಕ್ಷಾ ಜಿ. ( ಎಸ್ ವಿ ಎಸ್ ದೇವಳ ಆಂಗ್ಲಮಾಧ್ಯಮ ಶಾಲೆ ಬಂಟ್ವಾಳ) ತೃತೀಯ ಸ್ಥಾನ ಪಡೆದಿದ್ದಾರೆ .

By suddi9

Leave a Reply

Your email address will not be published. Required fields are marked *