|
ಉಡುಪಿಯ ಕವಿ ಮುದ್ದಣ ಮಾರ್ಗ ಇಲ್ಲಿಯ, ಜಗದ್ಗುರು ಶ್ರೀನಿತ್ಯಾನಂದ ಮಂದಿರ-ಮಠದ 58ನೇ ವಾರ್ಷಿಕ ಮಹೋತ್ಸವ ಮತ್ತು ಏಕಾಹ ಭಜನೆ, ಪಲ್ಲಕ್ಕಿ ಮೆರವಣಿಗೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನ.24 ಆದಿತ್ಯವಾರದಿಂದ ಪ್ರಾರಂಭಗೊಂಡು ನ.25 ಸೋಮವಾರದ ವರೆಗೆ ನಡೆಯಲಿದೆ.
ಆದಿತ್ಯವಾರ ಸಂಜೆ 4-30 ಕ್ಕೆ ನಿತ್ಯಾನಂದ ಮಂದಿರದಿಂದ ಪಲ್ಲಕ್ಕಿ ಮೆರವಣಿಗೆ ಹೊರಟು ತ್ರಿವೇಣಿ ವೃತ್ತದ ಬಳಿ ತಿರುವು ಪಡೆದು, ಕನಕದಾಸ ರಸ್ತೆಯ ಮೂಲಕ ರಥಬೀದಿ, ತೆಂಕಪೇಟೆ, ಹಳೆ ಅಂಚೆ ಕಛೇರಿ ರಸ್ತೆಯ ಮೂಲಕ ಸಾಗಿಬಂದು ಹಳೆ ಡಯಾನ ವೃತ್ತದ ಬಳಿ ತಿರುವು ಪಡೆದು, ಕವಿ ಮುದ್ದಣ ಮಾರ್ಗದ ಮೂಲಕ ಪಲ್ಲಕ್ಕಿ ಮೆರವಣಿಗೆ ಮಂದಿರ ಸೇರಲಿದೆ.
ನ.25 ಸೋಮವಾರ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, 12-15 ಕ್ಕೆ ಪಲ್ಲಪೂಜೆ, 12-30 ಕ್ಕೆ ಬಾಲಭೋಜನ, 1 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.
|

