ಬಂಟ್ವಾಳ : ತಾಲೂಕಿನ ಬಡಗಬೆಳ್ಳೂರು ಗ್ರಾಮದ ವರಟಿಲ್ – ಮುಲಾರಪಟ್ನವರೆಗೆ ಶಾಸಕರ ನಿಧಿಯಿಂದ ಸುಮಾರು 1.50 ಕೋ.ರೂ.ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶನಿವಾರ ಲೋಕಾರ್ಪಣೆಗೈದರು.
IMG-20191109-WA0023ರಸ್ತೆ  ಉದ್ಘಾಟಿಸಿ ಮಾತನಾಡಿದ ಶಾಸಕರುಪೊಳಲಿ- ಮೂಡಬಿದ್ರೆ ಸಂಪರ್ಕದ ಈ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿ ಅಭಿವೃದ್ದಿ ಪಡಿಸುವಂತೆ ಈ ಭಾಗದ ನಿವಾಸಿಗಳ ಬಹು ಕಾಲದ ಬೇಡಿಕೆ ಇದೀಗ ಈಡೇರಿದೆ.ಮುಂದಿನ ದಿನಗಳಲ್ಲಿ ಈ ಭಾಗದ ಜನರ  ಬೇಡಿಕೆಯನ್ನು ಹಂತ,ಹಂತವಾಗಿ ಪೂರೈಸಲಾಗುವುದು ಎಂದು ಭರವಸೆ ನೀಡಿದರು.
IMG-20191109-WA0022
ತಾ.ಪಂ ಸದಸ್ಯ ಯಶವಂತ ಪೊಳಲಿ, ಅರಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಗದೀಶ ಅಳ್ವ, ಪಂಚಾಯತ್ ಸದಸ್ಯರಾದ ಎಂ.ಬಿ.ಆಶ್ರಪ್, ಹಾಜಬ್ಬ,ಕ್ಷೇತ್ರ ಬಿಜೆಪಿ ಸಮಿತಿ ಉಪಾಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಕಾರ್ಯದರ್ಶಿ ನಂದರಾಮ ರೈ,  ಪ್ರಮುಖರಾದ ಪ್ರಕಾಶ್ ಆಳ್ವ, ರತ್ನಾಕರ ಕೋಟ್ಯಾನ್, ಹರಿಯಪ್ಪ ಮುತ್ತೂರು, ರಮಾನಾಥ ರಾಯಿ,  ಗಣೇಶ್ ರೈ, ರಂಜನ್ ಕುಮಾರ್, ಸುಂದರ ಶೆಟ್ಟಿ, ರಮೇಶ್ ಭಟ್ಟಾಜೆ, ಪುರುಷೋತ್ತಮ ಶೆಟ್ಟಿ,  ಎಂ.ಅಬ್ದುಲ್ ಹಮೀದ್ ,  ಸ್ಥಳೀಯ  ಮಸೀದಿ ಸಮಿತಿ ಅಧ್ಯಕ್ಷ ಅಶ್ರಪ್, ಜಿ.ಎಚ್.ಎಮ್,   ಎಂ.ಎಸ್.ಶಾಲಿ, ಕಾರ್ಯದರ್ಶಿ ಸಜೀಯುದ್ದೀನ್,  ಪುತ್ತುಮೋನು ಮಾರ್ಗದಂಗಡಿ, ಎ.ಪಿ.ನಾಶೀರ್, ಎಂ.ಪಿ.ಲತೀಪ್, ಇಬ್ರಾಹಿಂ, ಜಬ್ಬಾರ್, ಗುತ್ತಿಗೆದಾರ ಶಾಫಿ ಪಟ್ನ, ಕೆ.ಆರ್. ಡಿ .ಎಲ್. ನ ಇಂಜಿನಿಯರ್ ರಕ್ಷಿತ್, ಮತ್ತಿತರರು ಉಪಸ್ಥಿತರಿದ್ದರು. ‌

By suddi9

Leave a Reply

Your email address will not be published. Required fields are marked *