ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆಸಲಾದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸೈಂಟ್ ರೀಟಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಕುಮಾರಿ ಕ್ರಿಸ್ಟಲ್ ಜ್ಯೋತಿ ಲೋಬೋ ಇವರು ಪ್ರೌಢಶಾಲಾ ವಿಭಾಗದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರೆ,
ಕುಮಾರಿ ಕ್ಲ್ಯೇರಿಸ್ ಜೋಯ್ಸ್ ಲೋಬೋ ಇವರು ಕಿರಿಯ ಪ್ರಾಥಮಿಕ ವಿಭಾಗದ ಕೊಂಕಣಿ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಂಸ್ಥೆಯು ಇವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತ್ತದೆ. ಇವರಿಬ್ಬರೂ ಸೇರಾಜೆಯ ಕ್ಲೋಡಿ ಲೋಬೋ ಹಾಗೂ ಜೆಸಿಂತಾ ಲೋಬೊ ದಂಪತಿಗಳ ಪುತ್ರಿಯರಾಗಿರುತ್ತಾರೆ.

