ಬಂಟ್ವಾಳ: ತನ್ನ ಅವಧಿಯಲ್ಲಿ ಅನುಷ್ಠಾನಗೊಂಡ ಯೋಜನೆಗಳೆಲ್ಲವೂ ಕಾರ್ಯರೂಪಕ್ಕೆ ಬರುತ್ತಿರುವುದು ಸಂತೋಷದ ವಿಚಾರ. ಬಂಟ್ವಾಳ ಕ್ಷೇತ್ರದ ಎಲ್ಲ ಜನರಿಗೂ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ಯೋಜನೆ ತನ್ನ ಅವಧಿಯಲ್ಲಿ ಮಂಜೂರುಗೊಂಡು ಕಾರ್ಯರೂಪಕ್ಕೆ ಬರುತ್ತಿರುವುದರಿಂದ, ತನ್ನ ಕನಸು ಸಾಕಾರಗೊಳ್ಳುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.ಬುಧವಾರ ಮಾಣಿ ಮತ್ತು ಇತರೆ 51 ಜನವಸತಿಗಳಿಗೆ ಬಹುಗ್ರಾಮ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ಪ್ರದೇಶಗಳಿಗೆ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ. ನೇತೃತ್ವದ ನಿಯೋಗದ ಜೊತೆ ಭೇಟಿ ನೀಡಿದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

                        IMG-20191106-WA0071
16.46 ಲಕ್ಷ ರೂ ಅಂದಾಜಿನ ಮಾಣಿ ಬಹುಗ್ರಾಮ  ಯೋಜನೆ ಟೆಂಡರ್ ಹಂತಕ್ಕೆ ಬಂದಾಗ 19.18 ಕೋಟಿ ರೂ ಆಗಿತ್ತು. 51 ಜನವಸತಿ, ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು, ಕಡೇಶ್ವಾಲ್ಯ, ಬರಿಮಾರು ಗ್ರಾಪಂ ವ್ಯಾಪ್ತಿಗೆ ಇದು ಅನುಕೂಲವಾಗುತ್ತದೆ. 25,215 ಜನರಿಗೆ  ಪ್ರಯೋಜನವಾಗಲಿದೆ ಎಂದ ಅವರು ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆಯಾಗುತ್ತಿರುವುದು  ಸಂತೋಷದ ವಿಚಾರ ಎಂದು ಹೇಳಿದ ಅವರು ಕರೋಪಾಡಿ, ಸಂಗಬೆಟ್ಟು ಯೋಜನೆ ಅನುಷ್ಠಾನಗೊಂಡಿದೆ, ಬಿಟ್ಟುಹೋದ ತಾಲೂಕಿನ ಇತರೆ ಪ್ರದೇಶಗಳನ್ನು ಮುಡಿಪು, ಅಳಿಕೆ ಯೋಜನೆಯಡಿ ಸೇರಿಸಿಕೊಳ್ಳಲಾಗುತ್ತದೆ ಎಂದರು.IMG-20191106-WA0067

ಬಂಟ್ವಾಳ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಹತ್ವದ ೫ ಯೋಜನೆಗಳು ಮಂಜೂರಾತಿಯಾಗಿದೆ.ಈ ಯೋಜನೆಗಳು ಅನುಷ್ಠಾನವಾದ ಬಂಟ್ವಾಳ ಕ್ಷೇತ್ರ ಎಲ್ಲಾ ಗ್ರಾಮಗಳು ಯೋಜನೆಯ ಮೂಲಕ ನೀರು ಪೂರೈಕೆಯಾಗುವ ಮೂಲಕ ಇತಿಹಾಸ ಸೃಷ್ಠಿಸಲಿದೆ ಎಂದರು. ಈ ಯೋಜನೆಗಳು ಅನುಷ್ಠಾನದಲ್ಲಿ ಸಹಕರಿಸಿದ ಜಿಪಂ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು ಹಾಗೂ ಯೋಜನೆಗೆ ಮಂಜೂರಾತಿ ನೀಡಿದ ಮಾಜಿಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಮಾಜಿಸಚಿವ ರೈ ಅವರು ಸಲ್ಲಿಸಿದರು.

ಶಾಸಕನದಲ್ಲದ ಕಾರಣ ಅನಾನುಕೂಲತೆ:
ಬಹುಗ್ರಾಮ ಯೋಜನೆ ಜೀವಮಾನದಲ್ಲಿ ಬಹಳ ಸಂತೋಷವನ್ನು ಕೊಟ್ಟದೆ. ಕನಸಿನ ಆಶೋತ್ತರದ ಕಾರ್ಯಕ್ರಮದ ಮೂರನೇ ಯೋಜನೆ ಲೋಕಾರ್ಪಣೆಗೆ ಸಿದ್ದವಾಗಿದೆ. ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕನಲ್ಲದ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನಾನುಕೂಲವಾಗಿದೆ.ಜನರಿಗೆ ನೀಡುವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭಾಗವಹಿಸಬೇಕು. ತಾಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ರಮಾನಾಥ ರೈ ತಿಳಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಾ ಮಾವೆ, ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ ಶೆಟ್ಟಿ, ಪದ್ಮಶೇಖರ ಜೈನ್, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ತಾಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ ಮಾಣಿ ಮತ್ತಿತರರು ಹಾಜರಿದ್ದರು.

ಇಂಜಿನಿಯರ್ ಗೆ ತರಾಟೆ:

ಮಾಜಿ ಸಚಿವ ರಮಾನಾಥ ರೈ ಸಹಿತ ಜನಪ್ರತಿನಿಧಿಗಳು ಘಟಕದ ಬಳಿ ಬರುತ್ತಿದ್ದಂತೆ ಜಿಪಂ ಸದಸ್ಯರೊಬ್ಬರು ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿರುವ ಮಾಜಿ ಸಚಿವ ರಮಾನಾಥ ರೈ ಅವರನ್ನು ಅಮಂತ್ರಣಪತ್ರಿಕೆಯಲ್ಲಿ ವಿಶೇಷ ಆಹ್ವಾನಿತರೆಂದು ಉಲ್ಲೇಖಿಸಬೇಕಾಗಿತ್ತು ಎಂದು ಸ್ಥಳದಲ್ಲಿದ್ದ ಜಿಪಂ ಇಂಜಿನಿಯರರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು.ಕಾರ್ಯಕ್ರಮವನ್ನು ಶಿಷ್ಠಾಚಾರದಂತೆ ನಡೆಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರೂ ,ಜಿಪಂ ಸದಸ್ಯ ಸಮ್ಮನಾಗಲಿಲ್ಲ.ಆಗ ಮಾಜಿಸಚಿವ ರೈ ಅವರೇ ಸಮ್ಮನಿರುವಂತೆ ಸೂಚಿಸಿದರು.

By Suddi9

Leave a Reply

Your email address will not be published. Required fields are marked *