ಬಂಟ್ವಾಳ, : ಕ್ರೀಡೆಯು ಸಮಾಜದಲ್ಲಿ ಶಾಂತಿ-ಸಹಬಾಳ್ವೆಯನ್ನು ಬೆಳೆಸುತ್ತಿದ್ದು, ಯುವ ಜನಾಂಗ ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಂದು ಸಂಘ-ಸAಸ್ಥೆಗಳು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ದ.ಕ.ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಅವರು ಹೇಳಿದರು.

yuvaka
ಸರಪಾಡಿ ಯುವಕ ಮಂಡಲದ ವತಿಯಿಂದ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಪಾಡಿ ಯುವಕ ಮಂಡಲವು ಕಳೆದ ಹಲವು ದಶಕಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯವಾಗಿ ಮಾದರಿ ಸಂಘಟನೆಯಾಗಿ ಬೆಳೆದಿದೆ ಎಂದರು.
ದ.ಕ.ಜಿ.ಪಂ.ಸದಸ್ಯ ಬಿ.ಪದ್ಮಶೇಖರ್ ಜೈನ್ ಅವರು ಪಂದ್ಯಾಟವನ್ನು ಉದ್ಘಾಟಿಸಿದರು. ಆರ್ಯಭಟ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಕಾರ್ಯದರ್ಶಿ ಅಹಮ್ಮದ್ ಮುಸ್ತಾಫಾ, ಉಪ್ಪಿನಂಗಡಿ ಜೇಸಿಐ ಮಾಜಿ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಉಳಿ ಗ್ರಾ.ಪಂ.ಉಪಾಧ್ಯಕ್ಷ ಸುರೇಶ್ ಮೈರ, ಸರಪಾಡಿ ಗ್ರಾ.ಪಂ.ಸದಸ್ಯ ದಯಾನಂದ ಶೆಟ್ಟಿ ಅಮೈ, ಉಪನ್ಯಾಸಕ ಸುರೇಶ್ ನಂದೊಟ್ಟು, ನ್ಯಾಯವಾದಿ ಸುಂದರ ಬಾಚಕೆರೆ, ಪ್ರಮುಖರಾದ ಡಾ| ಬಾಲಚಂದ್ರ ಶೆಟ್ಟಿ ಮಿಯಾರು, ಶಶಿಕಾಂತ ಶೆಟ್ಟಿ ಆರುಮುಡಿ, ಲಿಯೋ ಫೆರ್ನಾಂಡೀಸ್, ಸುದರ್ಶನ್ ಬಜ, ಕುಸುಮಾಕರ ಶೆಟ್ಟಿ ಕುರ್ಯಾಳ, ಪುರುಷೋತ್ತಮ ಪೂಜಾರಿ ಮಜಲು, ಹರಿಪ್ರಸಾದ್ ಶೆಟ್ಟಿ, ಪದ್ಮಪ್ಪ ಪೂಜಾರಿ ಎಚ್.ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಶೆಟ್ಟಿ ಪಿ. ಸ್ವಾಗತಿಸಿದರು. ಮಾಜಿ ಅಧ್ಯಕ್ಷ ರಾಧಾಕೃಷ್ಣ ರೈ ಕೊಟ್ಟುಂಜ ವಂದಿಸಿದರು. ಕಾರ್ಯದರ್ಶಿ ಕಿರಣ್ ಸರಪಾಡಿ ನಿರ್ವಹಿಸಿದರು.

ಪಂದ್ಯಾಟದ ಫಲಿತಾಂಶ
ಪAದ್ಯಾಟದಲ್ಲಿ ಅಭಯರಾಜ್ ವಾಮಂಜೂರು ಪ್ರಥಮ, ಜಿರ‍್ಸ್ ಅಜಿಲಮೊಗರು ದ್ವಿತೀಯ, ಫ್ರೆಂಡ್ಸ್ ಮಿಯಾರುಪಲ್ಕೆ ತೃತೀಯ ಹಾಗೂ ಡಿಎಫ್‌ಸಿ ಲಕ್ಷೀ÷್ಮಗುಡ್ಡೆ ಚತುರ್ಥ ಬಹುಮಾನ ಪಡೆಯಿತು. ನಿಖಿಲ್ ಶೆಟ್ಟಿ ಉತ್ತಮ ಹೊಡೆತಗಾರ, ಚಂದನ್ ಕುಂದಾಪುರ ಉತ್ತಮ ಎತ್ತುಗಾರ ಹಾಗೂ ಅನುಷ್ ಸುವರ್ಣ ಸವ್ಯಸಾಚಿ ಆಟಗಾರ ಪ್ರಶಸ್ತಿ ಪಡೆದರು.
ಸಮಾರೋಪ ಸಮಾರಂಭದಲ್ಲಿ ಶಂಕರನಾರಾಯಣ ಹೊಳ್ಳ, ನಾರಾಯಣ ಶೆಟ್ಟಿ ಎಚ್, ಅರುಣ್ ಐತಾಳ್, ಚೇತನ್ ಕುಂದರ್, ಮ್ಯಾಥ್ಯು ಅಟವಟ್ಟು, ರಾಧಾಕೃಷ್ಣ ರೈ, ಎಸ್.ಪಿ.ಸರಪಾಡಿ, ಚಂದ್ರಶೇಖರ್ ಆಚಾರ್ಯ, ಜಯಚಂದ್ರ ಆಚಾರ್ಯ ಮೊದಲಾದವರು ಬಹುಮಾನ ವಿತರಿಸಿದರು.

By Suddi9

Leave a Reply

Your email address will not be published. Required fields are marked *