ಕೋಲಾರ : ಯಾಂತ್ರಿಕ ಜೀವನಕ್ಕೆ ಕನ್ನಡ ಬಾಷೆಯ ಮೂಲಕ ಚಿಕಿತ್ಸೆ ನೀಡುವುದು ಇಂದು ಅನಿವಾರ್ಯವಾಗಿದೆ ಎಂದು ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಭಾಗ್ಯ ಲಕ್ಷ್ಮಮ್ಮ ಅಭಿಪ್ರಾಯಪಟ್ಟರು. ಅವರು ನಗರದ ಪ್ರಧಾನ ಅಂಚೆ ಕಛೇರಿಯಲ್ಲಿ ಹಮ್ಮಿಕೊಂಡಿದ್ದ 64 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೌಖಿಕ ಬೌದ್ಧಿಕತೆಯ ಸೃಜನಶೀಲತೆಯನ್ನು ಉಳಿಸಿಕೊಳ್ಳುವಿಕೆಯಲ್ಲಿ ಅದು ಕನ್ನಡ ಭಾಷೆಯಿಂದಲೇ ಸಾಧ್ಯವಾಗುವುದು. ಕನ್ನಡ ಅನ್ನದ ಋಣವಾಗಲು ಬಹಳಷ್ಟು ವಿಶಿಷ್ಟವಾದ ಕಾರ್ಯಕ್ರಮಗಳನ್ನು ಸರ್ಕಾರ ಆಯೋಚನೆ ಮಾಡುವುದು ಇಂದು ಅತ್ಯಗತ್ಯವಾಗಿದೆ ಎಂದರು.
ಅತಿಥಿಗಳಾದ ಕವಿ ಡಾ. ಶರಣಪ್ಪ ಗಬ್ಬೂರು ಮಾತನಾಡಿ ಭೂಮಿಗೆ ಭಾರವಾದವರು ಅಕ್ಷರ ಕಲಿತವರೆಂದು ಬೇಸರ ವ್ಯಕ್ತಪಡಿಸುತ್ತ ಇಂದು ಕನ್ನಡ ಭಾಷೆಯನ್ನು ಉಳಿಸಿಕೊಳ್ಳಲು ಪರದಾಡುವಂತಹ ಸ್ಥಿತಿಯಲ್ಲಿದ್ದೇವೆ. ಎಲ್ಲರು ಕನ್ನಡ ನೆಲದಲ್ಲಿ ಇದ್ದುಕೊಂಡು ನಮ್ಮ ಮಕ್ಕಳನ್ನು ಇಂಗ್ಲೀಷ್ ಭಾಷೆಯನ್ನು ಕಲಿಯಲು ನಾವೆಲ್ಲಾ ಉತ್ಸುಕರಾಗುತ್ತಿದ್ದೇವೆ ಎಂದು ಮನವರಿಕೆ ಮಾಡಿಕೊಟ್ಟರು. ಕೇಂದ್ರ ಸರ್ಕಾರದ ಅಡಿಯಲ್ಲಿದ್ದರೂ ಇಲ್ಲಿರುವ ಎಲ್ಲ ಕನ್ನಡ ಮನಸ್ಸುಗಳು
ಇಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದು ಉತ್ತಮವಾದಂತಹ ಸಂದೇಶ ಎಂದರು. ಇನ್ನೊಬ್ಬ ಅತಿಥಿಗಳಾದ ಡಾ. ಮುನಿರಾಜ ಮಾತನಾಡಿ ಕನ್ನಡ ಭಾಷೆಯಿಂದ ಮನುಷ್ಯನ ಸಂವೇಧನೆಗಳು ಸಂಬಂಧಗಳನ್ನು ಬೆಸೆಯುವಂತಹ ಉತ್ತಮವಾದಂತಹ ಕ್ರಿಯೆ ಉಂಟಾಗುತ್ತದೆ ಎಂದು ಹೇಳುತ್ತ ನಮ್ಮ ಹಳ್ಳಿಯ ಜನರು ಹಿಂದೆ ಕನ್ನಡ ಭಾಷೆಯನ್ನು ಬಿಟ್ಟು ಬೇರೆ ಯಾವ ಮಾತನಾಡುತ್ತಿರಲಿಲ್ಲ ಆದರೆ ಇಂದು ಹಳ್ಳಿಯ ಭಾಷೆಯ ಸಂಸ್ಕøತಿಯ ಸೊಗಡನ್ನು ಮರೆಯುತ್ತ ಎಲ್ಲರು ಹಾದಿ ತಪ್ಪುತ್ತಿದ್ದಾರೆ ಎಂದು ಹೇಳಿದರು.

ಅಂಚೆ ಕಛೇರಿಯ ತರಬೇತುದಾರ ಬಿ. ಎಂ ಮಂಜುನಾಥ ಮಾತನಾಡಿ ಕ್ಷಣಿಕ ಸುಖದ ಕಲ್ಪನೆಗಳಿಗಾಗಿ ಕನ್ನಡ ಭಾಷೆಯನ್ನು ಮರೆತು ಆಂಗ್ಲಭಾಷೆಯನ್ನು ಕಲಿಯುತ್ತಿರುವುದು ಸೋಜಿಗದ ಸಂಗತಿ ಎಂದು ಹೇಳುತ್ತ ಕನ್ನಡ ರಾಜ್ಯೋತ್ಸವಕ್ಕೆ ತನ್ನದೇ ಆದ ಪರಂಪೆಯನ್ನು ಪಡೆದುಕೊಂಡು ಬಂದಿದೆ. ಆ ನಿಟ್ಟಿನಲ್ಲಿ ಎಲ್ಲರು ಕನ್ನಡ ಭಾಷೆಯನ್ನು ನಮ್ಮ ದಿನನಿತ್ಯದ ಬಳಕೆಯಲ್ಲಿ ಅದನ್ನು ಅಳವಡಿಸಿಕೊಂಡಾಗ ಅದು ನಿತ್ಯ ನಿರಂತರವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಅಂಚೆ ಕಛೇರಿಯಲ್ಲಿ ಎಲ್ಲಾ ಉದ್ಯೋಗಸ್ಥರಿಗಾಗಿ ಪ್ರಬಂಧ ಸ್ಪರ್ಧೆ, ಸಂಗೀತ ಸ್ಪರ್ಧೆ, ಅನುವಾದ ಸ್ಪರ್ಧೆ, ಉಖ್ತ ಲೇಖನ ಸ್ಪರ್ಧೆ, ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಗೆದ್ದಂತವರಿಗೆ ಬಹುಮಾನಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಡಾ. ಪೋಸ್ಟ್ ನಾರಾಯಣಸ್ವಾಮಿ, ಎ.ಪಿ.ಎಮ್ ನರಸಿಂಹಮಪ್ಪ, ಕೇಶವ, ಫರೀದಭಾನು, ಜಾನಕಿ, ಸುಭಾಷಿಣಿ, ಸುಹಾಸಿನಿ, ಕಾಂತಮ್ಮ, ರೂಪಕಲಾ. ಸ್ಮಿತಾ, ಶಶಿಕುಮಾರ್, ರಾಜಣ್ಣ, ಪ್ರದೀಫ್, ಲಾವಣ್ಯ, ಸರಸ್ಫತಿ, ಸುಹಾಸಿನಿ, ರಶ್ಮೀ, ಮಾಲಿನಿ, ಪದ್ಮಮ್ಮ, ಸುಶ್ಮ, ರಶ್ಮಿ, ನಾರಾಯಣಸ್ವಾಮಿ, ಜಯಶ್ರೀ, ಶಾಂತಮ್ಮ. ಸೂರ್ಯಪ್ರಕಾಶ, ಗೀತಾ, ಕೆ.ಎಮ್ ಮಂಜುನಾಥ, ಜಯಲಕ್ಷ್ಮಮ್ಮ, ಮುಂತಾದವರು ಉಪಸ್ಥಿತರಿದ್ದರು.

