ಬಂಟ್ವಾಳ: ಮಂಗಳವಾರ ರಾತ್ರಿ ತಾಲೂಕಿನ ವಿವಿದೆಡೆಯಲ್ಲಿ ಬಂದ ಹಠಾತ್ ಸಿಡಿಲಿನಬ್ಬರ,ಮಿಂಚು ಹಾಗೂ ಧಾರಾಕಾರ ಮಳೆಗೆ ಮೂರು ಮನೆಯ ಗೋಡೆ ಕುಸಿದು ಬಿದ್ದರೆ,ಎರಡು ಮನೆಗೆ ಸಿಡಿಲು ಬಡಿದು ಹಾನಿಯಾದ ಬಗ್ಗೆ ವರದಿಯಾಗಿದೆ.

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕುರ್ಮಾನ್ ಗೋಪಿ ಪೂಜಾರಿ ಅವರ ಮನೆಯ ಗೋಡೆಯ ಒಂದು ಭಾಗ ಆರಂಭದಲ್ಲಿ ಕುಸಿದು ಬಿದ್ದಿದೆ.ಮನೆಯ ಸದಸ್ಯರು ಊಟ ಮಾಡಿ ಮಲಗಿದ್ದ ವೇಳೆ ಈ ಘಟನೆ ನಡೆದಿದ್ದರೂ, ಯಾವುದೇ ಅಪಾಯ ಸಂಭವಿಸಿಲ್ಲ. ಸುದ್ದಿ ತಿಳಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್.ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಷ್ಟದ ಬಗ್ಗೆ ಅಂದಾಜಿಸಿದ್ದಾರೆ.ಸುಮಾರು 1.50 ಲಕ್ಷ ನಷ್ಟ ಉಂಟಗಬಹುದೆಂದು ಅಂದಾಜಿಸಲಾಗಿದೆ.

ಅರ್.ಎಸ್.ಎಸ್.ಪ್ರಮುಖ ಡಾ| ಪ್ರಭಾಕರ ಭಟ್, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ತಾಪಂ ಉಪಾಧ್ಯಕ್ಷ ದಿನೇಶ್ ಅಮ್ಟೂರು,ಮಾಜಿಜಿಪಂಸದಸ್ಯ ಚೆನ್ನಪ್ಪ ಕೋಟ್ಯಾನ್, ಗ್ರಾ.ಪಂ.ಅಧ್ಯಕ್ಷ ವಿಠಲ ನಾಯ್ಕ, ಬಿ.ಕೆ.ಅಣ್ಣುಪೂಜಾರಿ, ಕೃಷ್ಣಪ್ಪ ಆಚಾರ್ಯ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ದ್ದಾರೆ.ಕಳೆದ ಮೇ ತಿಂಗಳಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಕಲ್ಲಡ್ಕ ವತಿಯಿಂದ ಗೋಪಿಯವರ ಮನೆಯನ್ನು ತಾತ್ಕಾಲಿಕ ರಿಪೇರಿ ಮಾಡಿಕೊಡಲಾಗಿತ್ತು ಬಾಳ್ತಿಲ ಗ್ರಾಮದಲ್ಲಿ ಚಂದಪ್ಪ ಪೂಜಾರಿ ಅವರ ಕಚ್ಚಾ ಮನೆಗೆ ಹಾನಿಯಾಗಿದ್ದರೆ, ಸಜೀಪಮುನ್ನೂರುಗ್ರಾಮದ ನಂದಾವರದಲ್ಲಿ ರಾಜೇಂದ್ರ ಅವರ ಮನೆಯ ಒಂದು ಭಾಗದಲ್ಲಿ ಕುಸಿದು ಬಿದ್ದಿದೆಯಲ್ಲದೆ ಹಂಚು,ರೀಪು ಮುರಿದಿದ್ದು,ಉಳಿದ ರೀಪುಗಳು ಮುರಿಯುವ ಸಾಧ್ಯತೆಯಿರುವುದರಿಂದ ಮನೆಯ ಸದಸ್ಯರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಲು ಸೂಚಿಸಲಾಗಿದೆ. ಕುರಿಯಾಳ ಗ್ರಾಮದ ಚಂದ್ರಯ್ಯ ಆಚಾರಿ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಗೊಳಗಾಗಿದೆ. ಟಿ.ವಿ.ಹಾನಿಯಾಗಿದ್ದು,ವಿದ್ಯುತ್ ವಯರ್ ಕರಟಿಹೋಗಿದೆ. ವಿಟ್ಲ ಕಸಬಾ ಗ್ರಾಮದ ಗುಲಾಬಿ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಗೊಳಗಾಗಿದೆ. ವಿದ್ಯುತ್ ವಯರ್ ಕರಟಿಹೋಗಿದೆ.
ಈ ಭಾಗದಲ್ಲಿ ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗಿಕೊಂಡು ತೋಟ,ಗದ್ದೆಯ ಮಧ್ಯೆ ಹಾದುಹೋಗಿರುವುದರಿಂದ ರಾತ್ರಿ ವೇಳೆ ಲೈನ್ ಫಾಲ್ಟ್ ಪತ್ತೆ ಹಚ್ಚಲು ಕಷ್ಟಸಾಧ್ಯ ಹಾಗೆಯೇ ರಾತ್ರಿ ಪಾಳೆಯದಲ್ಲಿ ಇಬ್ಬರೇ ಲೈನ್ ಮ್ಯಾನ್ ಕರ್ತವ್ಯದಲ್ಲಿರುವುದರಿಂದ ವಿಳಂಬವಾಗುತ್ತಿದೆ ಎಂದು ರಾತ್ರಿ ಪಾಳೆಯದಲ್ಲಿದ್ದ ಮೆಸ್ಕಾಂ ಕಿರಿಯ ಇಂಜಿನಿಯರ್ ತಿಳಿಸಿದ್ದಾರೆ. ಬಡ್ಡಕಟ್ಟೆ ಟ್ರಾನ್ಸ್ ಫಾರ್ಮರ್ ವ್ಯಾಪ್ತಿಯಲ್ಲಿ ಮಳೆ ಅಥವಾ ಸಿಡಿಲಿನ ಸಂದರ್ಭ ವಿದ್ಯುತ್ ಕಡಿತಗೊಂಡರೆ ಮತ್ತೆ ವಿದ್ಯುತ್ ಪುರೈಕೆಯಾಗಲು ತಾಸುಗಟ್ಟಲೆ ಸಮಯ ಕಳೆಯುತ್ತಿದ್ದು,ವಿದ್ಯುತ್ ಗ್ರಾಹಕರು ಹೈರಾಣವಾಗುತ್ತಿದ್ದರೆ. ರಾಜಕೀಯ ಡೊಂಬರಾಟಕ್ಕೆ ಬಡ್ಡಕಟ್ಟೆಯಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸಿ ಕೆಲ ಸಂಪರ್ಕವನ್ನು ಇಲ್ಲಿಗೆ ಕೊಟ್ಟ ಬಳಿಕ ಈ ಭಾಗದ ವಿದ್ಯುತ್ ಗ್ರಾಹಕರು ಈ ಹಿಂದೆ ಕತ್ತಲಲ್ಲಿ ಕಳೆದ ಉದಾಹರಣೆಯ ಇದೆ. ಮಂಗಳವಾರ ರಾತ್ರಿಯ ಹಠಾತ್ ಮಳೆಯಿಂದಾಗಿ ಬೆಳಕಿನ ಹಬ್ಬ ದೀಪಾವಳಿಯನ್ನು ಜನರು ಕತ್ತಲಲ್ಲಿ ಆಚರಿಸುವಂತಾಯಿತು.
