ಬಂಟ್ವಾಳ: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಅವಿಭಜಿತ ದ.ಕ.ಜಿಲ್ಲೆ, ಜೀವಂತ ಹೆರಿಗೆಯ ವಿಚಾರದಲ್ಲೂ ಪ್ರಗತಿ ಸಾಧಿಸಿವೆ. ಆರೋಗ್ಯ ಇಲಾಖೆಯು ಹೆಚ್ಚಿನ ಸಾಧನೆ ಮಾಡುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸುವ ಎಂಆರ್‌ಪಿಎಲ್‌ನ ಕಾರ್ಯ ಅಭಿನಂದನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಎಂಆರ್‌ಪಿಎಲ್ ಸಂಸ್ಥೆಯು ಸುಮಾರು ೫೨ ಲಕ್ಷ ರೂ.ವೆಚ್ಚದಲ್ಲಿ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ಸರಕಾರಿ ಆಸ್ಪತ್ರೆಗಳಿಗೆ ನೀಡಿದ ೪ ಆ್ಯಂಬುಲೆನ್ಸ್ ಗಳ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಂಸದ ನಳಿನ್‌ಕುಮಾರ್ ಕಟೀಲು ಮಾತನಾಡಿ, ಸಾಮಾಜಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಎಂಆರ್‌ಪಿಎಲ್ ಸಂಸ್ಥೆಯು ಕಳೆದ ವರ್ಷ ೪೦ ಕೋ.ರೂ.ಗಳ ಸಿಎಸ್‌ಆರ್ ಅನುದಾನ ನೀಡಿದೆ. ಹಿಂದೆ ಲೇಡಿಗೋಶನ್ ಆಸ್ಪತ್ರೆಗೆ ಕಟ್ಟಡದ ಅವಶ್ಯಕತೆಯಿದ್ದಾಗ ೨೪ ಕೋ.ರೂ.ಗಳನ್ನು ನೀಡಿರುವುದು ಶ್ಲಾಘನೀಯ ಎಂದರು.

ಬಂಟ್ವಾಳ ಆಸ್ಪತ್ರೆಗೆ ಸೌಕರ್ಯಗಳನ್ನು ಒದಗಿಸುವಂತೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸಚಿವರಲ್ಲಿ ಮನವಿ ಮಾಡಿದರು. ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಸದಸ್ಯರಾದ ತುಂಗಪ್ಪ ಬಂಗೇರ, ಎಂ.ಎಸ್.ಮಹಮ್ಮದ್, ರವೀಂದ್ರ ಕಂಬಳಿ, ಮಂಜುಳಾ ಮಾವೆ, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ಸದಸ್ಯರಾದ ಪ್ರಭಾಕರ ಪ್ರಭು,ಗಣೇಶ್ ಸುವರ್ಣ,ಮಹಾಬಲ ಆಳ್ವ ಬಂಟ್ವಾಳ ಪುರಸಭಾ ಸದಸ್ಯರಾದ ಗೋವಿಂದ ಪ್ರಭು,ದೇವಕಿ,ಶಶಿಕಲಾ,ರೇಖಾ ಪೈ , ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಎಂಆರ್‌ಪಿಎಲ್ ಸಂಸ್ಥೆಯ ಎಚ್‌ಆರ್‌ನ ಜಿಜಿಎಂ ಬಿ.ಎಚ್.ವಿ.ಪ್ರಸಾದ್, ಸಿಎಸ್‌ಆರ್ ಜನರಲ್ ಮ್ಯಾನೇಜರ್ ಸುಬ್ರಾಯ ಭಟ್, ಸೀನಿಯರ್ ಮ್ಯಾನೇಜರ್ ರಾಮಸುಬ್ರಹ್ಮಣ್ಯ,ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಸುಲೋಚನಾ ಭಟ್ ಜಿ.ಕೆ., ದೇವದಾಸ್ ಶೆಟ್ಟಿ, ರಾಮದಾಸ್ ಬಂಟ್ವಾಳ,ಮೋನಪ್ಪ ದೇವಸ್ಯ ಬಂಟ್ವಾಳ ಟಿಎಚ್‌ಒ ಡಾ| ದೀಪಾ ಪ್ರಭು, ಬೆಳ್ತಂಗಡಿ ಟಿಎಚ್‌ಒ ಡಾ| ಕಲಾಮಧು, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಸದಾಶಿವ ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ಸ್ವಾಗತಿಸಿ, ವಂದಿಸಿದರು.

