ಬಂಟ್ವಾಳ: ಮಂಗಳೂರು ಕ್ಷೇತ್ರದ ಸಜೀಪನಡು ಗ್ರಾಮದ ಜಂಕ್ಷನ್ ನಿಂದ ಹೊಳೆಬದಿಯವರೆಗಿನ ಸುಮಾರು ೧.೨೫ ಕಿಲೋಮೀಟರ್ ರಸ್ತೆಯನ್ನು 2.10ಲಕ್ಷ ವೆಚ್ಚದಲ್ಲಿ ಗ್ರಾಮ ಸುಂದರೀಕರಣಗೊಳಿಸುವ ಕಾಮಗಾರಿಗೆ ಶಾಸಕ ಯು.ಟಿ. ಖಾದರ್ ರವರು ಮಂಗಳವಾರ ಶಿಲಾನ್ಯಾಸ ನೆ ವೇರಿಸಿದರು.
ಮಾಜಿ ಜಿಪಂ ಸದಸ್ಯ ಎಸ್.ಅಬ್ಬಾಸ್, ಸಜೀಪ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ.ಅಬ್ದುಲ್ ರಝಾಕ್, ಮಾಜಿ ಜಿಲ್ಲಾಪಂಚಾಯತ್ ಸದಸ್ಯರಾದ ಉಮರ್ ಫಾರೂಖ್, ಜಾತ್ಯಾತೀತ ಜನತಾದಳದ ರಾಜ್ಯ ಕಾರ್ಯದರ್ಶಿ ಎಸ್.ಮೊಹಮ್ಮದ್ ಶಫಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಆಲ್ವ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್. ಸಜೀಪನಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸೋಮನಾಥ ಭಂಡಾರಿ, ಹಾಗೂ ಎಸ್.ಕೆ ಮೊಹಮ್ಮದ್, ಸಜೀಪನಡು ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಗೋಳಿಪಡ್ಪು, ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷರಾದ ಇಂತಿಯಾಝ್ ತುಂಬೆ, ಕರ್ಣಾಟಕ ರಾಜ್ಯ ರಸ್ತೆಸಾರಿಗಾ ನಿಗಮದ ಮಾಜಿ ನಿರ್ದೇಶಕರಾದ ರಮೇಶ್ ಶೆಟ್ಟಿ ಬೋಳಿಯಾರ್. ಹನೀಫ್, ಆಶಿಫ್ ಉಪಸ್ಥಿತರಿದ್ದರು.ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜೀಪ ಸ್ವಾಗತಿಸಿ,ಇರಾ ಗ್ರಾಪಂ ಅಧ್ಯಕ್ಷ ರಝಾಕ್ ಕುಕ್ಕಾಜೆ ವಂದಿಸಿದರು
