ಫರಂಗಿಪೇಟೆ : ಉಚಿತ ದಂತ ಭಾಗ್ಯ ಶಿಬಿರ ದ ಫಲಾನುಭವಿಗಳು ಮನಸಾರೆ ನಗುವಂತಹ ಭಾಗ್ಯ ಒದಗಿಸಿದಂತಾಗಿದೆ ಆರೋಗ್ಯ ಹಾಗು ಸೌಂದರ್ಯ ಏಕ ಕಾಲ ದಲ್ಲಿ ಲಭಿಸಿದಂತಾಗುತ್ತದೆ ಎಂದು ಬಂಟ್ವಾಳ ತಹಶೀಲ್ದಾರ್ ಹಾಗು ತಾಲೂಕು ದಂಡಾದಿಕಾರಿಗಳಾದ ಶ್ರೀಮತಿ ರಶ್ಮಿ ಎಸ್ ಆರ್ ರವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ರಾಷ್ಟ್ರೀಯ ಬಾಯಿ ಆರೋಗ್ಯ ನೀತಿ , ಎ ಬಿ ಶೆಟ್ಟಿ ದಂತ ವೈದ್ಯಕೀಯ ಮಹಾ ವಿದ್ಯಾಲಯ ದೇರಳಕಟ್ಟೆ , ಸೇವಾಂಜಲಿ ಆರೋಗ್ಯ ಕೇಂದ್ರ ಫರಂಗಿಪೇಟೆ ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಬಂಟ್ವಾಳ ತಾಲೂಕು , ಮಂಗಳೂರು ಮತ್ತು ಮೂಡಬಿದ್ರೆ ಪ್ರದೇಶದ ಬಿ ಪಿ ಎಲ್ ಕಾರ್ಡ್  ಫಲಾನುಭವಿಗಳ ಉಚಿತ ದಂತ ಭಾಗ್ಯ ಶಿಬಿರ ದಲ್ಲಿ ಭಾಗವಹಿಸಿ ಮಾತನಾಡಿದರು.
IMG_2552
 ಆ ಬಳಿಕ ಮಾತನಾಡಿದ ಎ ಬಿ ಶೆಟ್ಟಿ ದಂತ ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ  ಡಾ ಯು ಎಸ್  ಕೃಷ್ಣ ನಾಯಕ್ ರವರು  ಏಕ ಕಾಲ ದಲ್ಲಿ ದಂತ ಪಂಕ್ತಿ ಜೋಡಣೆ ಮತ್ತು ವಿತರಣೆ ಮಾಡುವ ಪ್ರಯೋಗ ಯಶಸ್ವೀ ಯಾಗಿದೆ ಸುಮಾರು 70 ಫಲಾನುಭವಿಗಳಿಗೆ ಒಂದೇ ದಿನದಲ್ಲಿ ಇದರ ಲಾಭ ಪಡೆಯಲಿದ್ದಾರೆ ಎಂದರು
  ಈ ಸಂದರ್ಭ ದಲ್ಲಿ  ವಿಭಾಗ ಮುಖ್ಯಸ್ಥರು ಕೃತಕ ದಂತ ಪಂಕ್ತಿ ಜೋಡಣಾ ವಿಭಾಗದ  ಡಾ ಚೇತನ್ ಹೆಗ್ಡೆ ಸೇವಾಂಜಲಿ  ಪ್ರತಿಷ್ಠಾನ  ಫರಂಗಿಪೇಟೆ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ , ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ಏನ್ ಓ ಹೆಚ್ ಪಿ ನೋಡಲ್ ಅಧಿಕಾರಿ ಮತ್ತು ದಂತ ವೈದ್ಯಾಧಿಕಾರಿ ಗಳಾದ  ಡಾ ಲವೀನಾ ನೊರೊನ್ಹಾ  ,  ದಂತ ವೈದ್ಯದಿಕಾರಿಗಳಾದ ಡಾ ನಫೀಸಾ , ಡಾ ಸುಧಾಕರ ಶೆಟ್ಟಿ , ಡಾ ಅಂಬಿಕ, ಡಾ  ರಂಜಿತ್ ಶೆಟ್ಟಿ ,ಸೇವಾಂಜಲಿ ಪ್ರತಿಷ್ಠಾನದ ಕೋಶಾಧಿಕಾರಿ  ಅರ್ಕುಳ  ಗೋವಿಂದ ಶೆಣೈ  ಮತ್ತಿತರರು ಉಪಸ್ಥಿತರಿದ್ದರು
 ಬಂಟ್ವಾಳ ತಾಲೂಕು ಮುಖ್ಯ ವೈದ್ಯಾಧಿಕಾರಿಗಳಾದ   ಡಾ .  ಪ್ರದೀಪ್ ಪೂಜಾರಿ ಕೆ ರವರು ಸ್ವಾಗತಿಸಿದರು ,  ಅರ್ಜುನ್ ಪೂಂಜಾರವರು ಕಾರ್ಯಕ್ರಮ ನಿರೂಪಿಸಿದರು.
Attachments area

 

By Suddi9

Leave a Reply

Your email address will not be published. Required fields are marked *