ಮೂಡುಬಿದರೆ: ನಿಡ್ಡೋಡಿಯಲ್ಲಿ 4 ಸಾವಿರ ಮೆಗಾವ್ಯಾಟ್ ಉಷ್ಣವಿದ್ಯುತ್ ಸ್ಥಾವರವನ್ನು ಸಕರ್ಾರ ಬಲವಂತದಿಂದ ಸ್ಥಾಪಿಸಲು ಹೊರಟಿರುವುದನ್ನು ಕೆಜೆಪಿ ವಿರೋಧಿಸುತ್ತದೆ. ಯೋಜನೆಯಿಂದ ನಿಡ್ಡೋಡಿ ಆಸುಪಾಸಿಗೆ ಮಾತ್ರವಲ್ಲ ಪಶ್ಚಿಮ ಘಟ್ಟ ಪ್ರದೇಶಕ್ಕೂ ಹಾನಿಯಾಗಲಿದೆ. ಸಕರ್ಾರ ಯೋಜನೆಯನ್ನು ಕೈಬಿಡದಿದ್ದಲ್ಲಿ ಇದರ ವಿರುದ್ಧ ಹೈಕೋಟರ್್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸಿ ತಡೆಯಾಜ್ಞೆ ತರಲಾಗುವುದು. ನಂತರ ಸ್ಥಳೀಯರೊಂದಿಗೆ ಸೇರಿ ಯೋಜನೆ ವಿರುದ್ಧ ಹೋರಾಡಲಾಗುವುದು ಕೆಜೆಪಿ ಅಧ್ಯಕ್ಷ ಪದ್ಮನಾಭ ಪ್ರಸನ್ನ ಹೇಳಿದರು.

niddodi
ಭಾನುವಾರ ಮೂಡುಬಿದರೆ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು. ಯೋಜನೆ ರದ್ದತಿಗೆ ಪ್ರಾಣತ್ಯಾಗಕ್ಕೂ ಸಿದ್ಧ ಎಂದಿರುವ ಸ್ಥಳೀಯ ಶಾಸಕ ಅಭಯಚಂದ್ರ ಬೂಟಾಟಿಕೆಯ ಹೇಳಿಕೆಯನ್ನು ಬಿಟ್ಟು ನಮ್ಮ ಜತೆ ಹೋರಾಟದಲ್ಲಿ ಭಾಗಿಯಾಗಲಿ ಎಂದು ಸವಾಲು ಹಾಕಿದರು.
ಕೆಜೆಪಿಗೆ ಮತ್ತು ಆರು ಕೋಟಿ ಕನ್ನಡಿಗರಿಗೆ ಮಾಜಿ ಮುಖ್ಯಮಂತ್ರಿ ಯಡಿಯ್ಯೂರಪ್ಪ ದ್ರೋಹವೆಸಗಿದ್ದಾರೆ. ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವುದಕ್ಕೆ ನನ್ನ ವಿರೋಧವಿತ್ತು. ಸ್ಪೀಕರ್ ಕಾಗೋಡ್ ತಿಮ್ಮಪ್ಪ ಅವರಿಗೆ ಆಕ್ಷೇಪ ಸಲ್ಲಿಸಿದ್ದು ಯಡ್ಯೂರಪ್ಪ ಅವರ ಶಾಸಕತ್ವ ರದ್ದತಿಗೂ ಮನವಿ ಮಾಡಿದ್ದೆ. ಯಡಿಯ್ಯೂರಪ್ಪ ಅವರು ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಅಪಿದಾವಿತ್ನಲ್ಲಿ ಕೆಜೆಪಿ ಅಧ್ಯಕ್ಷರಾದ ನನ್ನ ಸಹಿಯನ್ನು ಪೋರ್ಜರಿ ಮಾಡಿದ್ದಾರೆ. ಇದರ ವಿರುದ್ಧ ನಾನು ಚುನಾವಣೆ ಆಯೋಗ ಮತ್ತು ಕೋಟರ್್ಗೆ ದೂರು ನೀಡಿದ್ದೇನೆ. ಕೋಟರ್್ನಲ್ಲಿ ವಿಚಾರಣೆ ನಡೆಯುತ್ತಿದೆ. ತಮಿಳುನಾಡು ಮುಖ್ಯಮಂತ್ರಿಯಂತೆ ಯಡಿಯ್ಯೂರಪ್ಪ ಕೂಡ ಶೀಘ್ರದಲ್ಲೇ ಜೈಲು ಸೇರಲಿದ್ದಾರೆ ಎಂದ ಅವರು ಯಡ್ಡಿಗೆ ಶಿಕ್ಷೆಯಾಗವವರೆಗೆ ನಾನು ರಾಜಕೀಯದಿಂದ ವಿರಮಿಸುವುದಿಲ್ಲ ಎಂದು ಹೇಳಿದರು.
ರಾಜ್ಯ ಸಂಘಟನಾ ಕಾರ್ಯದಶರ್ಿ ಯಾಶೀರ್, ಕಾಮರ್ಿಕ ಮುಖಂಡ ಸುದತ್ತ ಜೈನ್ ಮತ್ತು ಕೆಜೆಪಿ ಯುವ ಸಂಘಟನಾ ಕಾರ್ಯದಶರ್ಿ ಚೇತನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *