ಬಂಟ್ವಾಳ : ಮಾಣಿ ಸಮೀಪದ ಕೊಡಾಜೆಯಲ್ಲಿ ಜನರಿಕ್ ಜನ ಔಷದಿ ಕೇಂದ್ರ ಲೋಕಾರ್ಪಣೆ ಶನಿವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು, ಕೇಂದ್ರದ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು,ಭಾರತ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಈ ಜನಔಷದಿ ಕೇಂದ್ರದಲ್ಲಿ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಔಷಧ ಮತ್ತು ಸೇವೆಯನ್ನು ನೀಡುತ್ತಿದ್ದು ಜನರು ಇದರ ಸದುಪಯೋಗವನ್ನು ಮಾಡಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ನಿರ್ದೇಶಕರಾದ ಮಹದೇವ ಶಾಸ್ತ್ರೀ ವಹಿಸಿದ್ದು,ವಿವೇಕಾನಂದ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಗೋಪಿನಾಥ್ ಶೆಟ್ಟಿ ಅತಿಥಿಯಾಗಿದ್ದರು.ಬಿಜೆಪಿ ರೈತ ಮೋರ್ಛಾ ಅಧ್ಯಕ್ಷ ತನಿಯಪ್ಪ ಗೌಡ ಸ್ವಾಗತಿಸಿದರು. ಜನಔಷದಿ ಕೇಂದ್ರ ಕೃಷ್ಣಪ್ರಸಾದ್ ಶೆಟ್ಟಿ ನೇರಳಕಟ್ಟೆ ವಂದಿಸಿದರು.
