ಟೆಂಪೋ-ಬೈಕ್ ಮುಖಾಮುಖಿ ಇಬ್ಬರು ಗಂಭೀರ
ಕೈಕಂಬ: ಬಜ್ಪೆ ಠಾಣಾ ವ್ಯಾಪ್ತಿಯ ಗಂಜಿಮಠ-ರಾಜ್ ಅಕಾಡೆಮಿ ಆಂಗ್ಲಮಾಧ್ಯಮ ಶಾಲಾ ಸಮೀಪ ಹಾಲಿನ ಟೆಂಪೂ ಹಾಗೂ ಬೈಕ್ ನಡುವೆ ಉಂಟಾದ ಅಪಘಾತಕ್ಕೆ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಬೆಳಿಗ್ಗೆ ಹತ್ತರ ಸುಮಾರಿಗೆ ನಡೆದಿದೆ.
ಅಪಘಾತಕ್ಕೆ ಗುರಿಯಾದವರ ಪೈಕಿ ಒಬ್ಬಾತನನ್ನು ಎಡಪದವು ಮಡಪಾಡಿ ಬೋರುಗುಡ್ಡೆ ನಿವಾಸಿ ಪ್ರಶಾಂತ್(23) ಹಾಗೂ ಮೂಡುಶೆಡ್ಡೆಯ ಫಿಟ್ಟರ್ ಕೆಲಸ ನಿರ್ವಹಿಸುವ ನಾಗರಾಜ್(27) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಪ್ರಶಾಂತ್ ಕಳೆದ ವರ್ಷ ಸುಂಕದಕಟ್ಟೆ ನಿರಂಜನಸ್ವಾಮಿ ಕಾಲೇಜ್ನಲ್ಲಿ ಪದವಿ ಮುಗಿಸಿ ಕೆಲಸ ಹುಡುಕುತ್ತಿದ್ದ. ಅದಕ್ಕಾಗಿ ಪ್ರಶಾಂತ್ ಸಂದರ್ಶನಕ್ಕೆಂದು ಹೊರಟ್ಟಿದ್ದ. ತನ್ನ ಆ್ಯಕ್ಟಿವಾ ಸ್ಕೂಟರ್ ಹಾಳಾಗಿತ್ತೆಂದು ಪ್ರಶಾಂತ್ ಅದನ್ನು ವಾಮಂಜೂರಲ್ಲಿ ನಿಲ್ಲಿಸಿ ಅದನ್ನು ರಿಪೇರಿ ಮಾಡಲೆಂದು ಫಿಟ್ಟರ್ ಕೆಲಸ ನಿರ್ವಹಿಸುತ್ತಿರುವ ಮೂಡುಶೆಡ್ಡೆಯ ನಾಗರಾಜ್ ಎಂಬಾತನ ಬೈಕ್ನಲ್ಲಿ ಹೋಗುತ್ತಿದ್ದರು.

Exif_JPEG_420

Exif_JPEG_420

Exif_JPEG_420

Exif_JPEG_420

Exif_JPEG_420

Exif_JPEG_420

Exif_JPEG_420

Exif_JPEG_420

Exif_JPEG_420

Exif_JPEG_420

Exif_JPEG_420

Exif_JPEG_420

Exif_JPEG_420
ಬೈಕ್ ಗಂಜಿಮಠ ರಾಜ್ ಅಕಾಡೆಮಿ ಶಾಲೆಗೆ ಹತ್ತಿರ ಹೋಗುತ್ತಿದ್ದಂತೆ ಮುಂದಿನಿಂಂದ ಬಂದ ನಂದಿನಿ ಹಾಲು ಸರಬರಾಜು ಮಾಡುವ ಟೆಂಪು ಒಮ್ಮೆಲೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಈ ವೇಳೆ ಬೈಕ್ ಮೂರು ತುಂಡಾಗಿ ಬಿದ್ದಿದ್ದು, ಪರಿಕರಗಳೆಲ್ಲಾ ಚದುರಿಬಿದ್ದಿದ್ದವು. ಬೈಕ್ನಲ್ಲಿದ್ದ ಇಬ್ಬರೂ ಸಹ ಚಕ್ರದ ಸಮೀಪ ಬಿದ್ದು ಗಂಭೀರ ಗಾಯಗೊಂಡಿದ್ದರು ಎನ್ನಲಾಗಿದೆ.
ಪ್ರಶಾಂತ್ ಮಂಗಳೂರಿನ ಖಾಸಗಿ ಕಂಪೆನಿಯೊಂದರ ಉದ್ಯೋಗಕ್ಕೆ ಸಂದರ್ಶನ ಎದುರಿಸಲು ತೆರಳುತ್ತಿದ್ದ. ಅಪಘಾತದ ತೀವ್ರತೆಗೆ ಆತನ ಆಧಾರ್ ಕಾಡರ್್ ಮುಂತಾದ ಪ್ರಮಾಣ ಪತ್ರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಗಾಯಾಳುಗಳನ್ನು ವ್ಯಕ್ತಿಯೋರ್ವರು ತನ್ನ ಸ್ಕಾಫರ್ಿಯೋ ವಾಹನದಲ್ಲಿ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.
ಅಲ್ಲಿನ ಸ್ಥಳೀಯ ಯುವಕರು ಯುವಕರು ರಕ್ತದ ಮಡುವಲ್ಲಿ ಬಿದ್ದಿದ್ದರೂ ಮೊಬೈಲ್ನಲ್ಲಿ ಫೋಟೋ ತೆಗೆದು ಅದನ್ನು ವಾಟ್ಸ್ಆ್ಯಪ್ನಲ್ಲಿ ಕಳಿಸುವುವುದರಲ್ಲೇ ಬ್ಯುಸಿಯಾಗಿದ್ದರೇ ವಿನಃ ಗಾಯಾಳುಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿರಲಿಲ್ಲ.
ಈ ಸ್ಥಳ ಡೇಂಜರ್ ಸ್ಫಾಟ್ ಆಗಿ ಗುರುತಿಸಿಕೊಂಡಿದೆ. ಇದಕ್ಕಿಂತ ಕೊಂಚ ದಿನಗಳ ಮುಂಚೆ ಸ್ಕೂಟರ್ ಒಂದಕ್ಕೆ ಹಸುವೊಂದು ಅಡ್ಡ ಬಂದ ಪರಿಣಾಮ ಗಂಭೀರವಸ್ಥೆಯಲ್ಲಿ ಆಸ್ಪತ್ರೆಗೆ ಸೇರಿದ್ದ. ಕಳೆದ ಆಗಸ್ಟ್ ತಿಂಗಳ 17ರ ಬೆಳಿಗ್ಗೆ ಅಪಘಾತಕ್ಕೆ ದಂಪತಿಯ ಬೈಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿತ್ತು. ಈ ಸ್ಥಳದಲ್ಲಿ ಹಂಪ್ಸ್ ನಿರ್ಮಿಸಬೇಕೆಂಬ ಆಗ್ರಹ ಸ್ಥಳೀಯರಿಂದ ಕೇಳಿಬಂದಿದೆ. ಬಜ್ಪೆ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

By suddi9

Leave a Reply

Your email address will not be published. Required fields are marked *