ಬಂಟ್ವಾಳ: ದೇವಸ್ಥಾನಗಳು ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದು, ರಾಜ್ಯದ ಶ್ರೀಮಂತ ದೇವಸ್ಥಾನ ಗಳನ್ನ ಗುರುತಿಸಿ ಅಲ್ಲಿ ಬಡವರ ಉಚಿತ ವಿವಾಹ ನಡೆಸುವ ಚಿಂತನೆ ಇದೆ ಎಂದು ಮುಜರಾಯಿ,ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ . ಫರಂಗೀಪೇಟೆ ಸಮೀಪದ ಕೊಡ್ಮಾಣ್ ನಲ್ಲಿ ನಡೆದ ೩೧ ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು ನೊಂದವರಿಗೆ ಬದುಕು ಕಟ್ಟಿಕೊಡುವಲ್ಲಿ ಸರಕಾರ ಬದ್ದವಾಗಿದೆ ಎಂದರು.
ವಿದ್ಯಾರ್ಥಿಗಳ ಕೊರತೆಯಿಂದ ಸರಕಾರಿ ಶಾಲೆ ಗಳು ಮುಚ್ಚುವ ಹಂತದಲ್ಲಿದೆ ಮೂಲಸೌಕರ್ಯಗಳ ಜೊತೆ , ಉತ್ತಮ ಶಿಕ್ಷಣ ದ ಮೂಲಕ ವಿದ್ಯಾರ್ಥಿಗಳು ಸರಕಾರೀ ಶಾಲೆ ಗಳಿಗೆ ಬರುವಂತ ವಾತಾವರಣ ಸೃಷ್ಟಿಸ ಬೇಕು , ಆ ನಿಟ್ಟಿನಲ್ಲಿ ಜಿಲ್ಲೆ ಯ ವಿದ್ಯಾ ಪ್ರೇಮಿ ಗಳು ಸರಕಾರೀ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿರುವುದು ಶ್ಳಾಘನೀಯವಾಗಿದೆ ಎಂದರು. .
ಕೊಡ್ಮಾಣ್ ಸರಕಾರೀ ಪ್ರೌಢ ಶಾಲೆ ಯಲ್ಲಿ ನಿರಂತರ ೧೦೦ ಶೇಖಡ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರನ್ನು ಗೌರವಿಸಲಾಯಿತು ಇದೇ ವೇಳೆ ಸಾಮಾಜಿಕ ಕಾರ್ಯಕರ್ತರಾದ ದಾಮೋದರ ನೆತ್ತರಕೆರೆಯವರನ್ನು ಸನ್ಮಾನಿಸಲಾಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ದ ಕ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ , ಮಂಗಳೂರು ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ಪ್ರೌಢ ಶಾಲಾ ಶಿಕ್ಷಕ ರಾಮಚಂದ್ರ ರಾವ್ , ಉತ್ಸವ ಸಮಿತಿ ಅಧ್ಯಕ್ಷರಾದ ಲಕ್ಷ್ಮಿಕಾಂತ್ ನಾಯಕ್ ಕೊಡ್ಮಾಣ್ , ಕಾರ್ಯದರ್ಶಿ ಸುಜಿತ್ ಕುಮಾರ್ , ಕೋಶಾಧಿಕಾರಿ ವಿನಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಪ್ರೌಢ ಶಾಲೆಗೆ ತರಗತಿ ಕೊಠಡಿಗಳು , ಕಚೇರಿ, ಲ್ಯಾಬೋರೇಟರಿ ,ರಸ್ತೆ ಗಳ ಅಭಿವೃದ್ದಿಗೆ ಅನುದಾನ ಕೋರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯ್ಗ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಶಾಲಾ ಮುಖ್ಯಶಿಕ್ಷರು ಸಚಿವರಿಗೆ ಮನವಿ ಸಲ್ಲಿಸಿದರು .
ದಿನಂಪ್ರತಿ ವೈದಿಕ , ಹೋಮ , ಸಾಂಸ್ಕ್ರತಿಕ ಕಾರ್ಯಕ್ರಮ ಗಳಲ್ಲದೆ ಜಯ ಭಾರತ ಗ್ರಾಮ ವಿಕಾಸ ದ ಸಹಯೋಗದೊಂದಿಗೆ ಡಾ ನಾರಾಯಣ ಶೆಣೈ ರಿಂದ ನೀರು -ಅರಿವು , ಡಾ ಶಿಕಾರಿ ಪುರ ಕೃಷ್ಣಮೂರ್ತಿ ಯವರಿಂದ ಧಾರ್ಮಿಕ ಸದ್ಭಾವನಾ , ಶ್ರೀ ಪುಂಡರೀಕಾಕ್ಷ ಯೋಗಾಚಾರ್ಯ ಬೆಳ್ಳೂರ್ ರವರಿಂದ ಕುಟುಂಬ ಪ್ರಬೋಧನ್– ನಮ್ಮ ಮನೆ ಎಂಬ ಚಿಂತನಾ ಕೂಟ ಕಾರ್ಯಕ್ರಮ ವನ್ನುಶಾರದ ಮಹೋತ್ಸವದಲ್ಲಿ ಆಯೋಜಿಸಲಾಗಿತ್ತು
ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಯವರು ಸ್ವಾಗತಿಸಿ ಪ್ರಸ್ತಾವನೆ ಗೈದರು ,ಸಂತೋಷ್ ಶೆಟ್ಟಿ ಕೊಡ್ಮಾಣ್ ವಂದಿಸಿದರು , ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು

