ಬಂಟ್ವಾಳ: ಬಿ.ಸಿ.ರೋಡ್ ನ ಕ.ಇ.ಬಿ ಯಿಂದ ಅಲೆತ್ತೂರುವರೆಗಿನ ಶಾಸಕರ ನಿಧಿ15 ಲಕ್ಷ ರೂ.ವೆಚ್ಚದ ಅನುದಾನದಲ್ಲಿ ಕಾಂಕ್ರೀಟೀಕರಣಗೊಂಡ ನೂತನ ರಸ್ತೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭಾನುವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು ಬಿ.ಸಿ.ರೋಡನ್ನು ಸುಂದರೀಕರಣಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ನೀಲನಕ್ಷೆ ಸಿದ್ದವಾಗಿದ್ದು,ಅ.21ರಂದು ಇದರ ಕಾಮಗಾರಿಗೂ ಚಾಲನೆ ನೀಡಲಾಗುತ್ತಿದೆ.IMG-20191006-WA0081

IMG-20191006-WA0082ಅಭಿವೃದ್ದಿ ಕಾರ್ಯಗಳಿಗೆ ಸಾರ್ವಜನಿಕರ ಸಹಭಾಗಿತ್ವವು ಅಗತ್ಯವಿದ್ದು,ಈ ದೆಸೆಯಲ್ಲಿ ಎಲ್ಲರು ಸಹಕರಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಪುರಸಭಾಸದಸ್ಯ ಗೋವಿಂದ ಪ್ರಭು,ಬಿಜೆಪಿ ಅಧ್ಯಕ್ಷರಾದ ದೇವದಾಸ ಶೆಟ್ಟಿ,ಮಾಜಿ ಸದಸ್ಯೆ ಸುಗುಣ ಕಿಣಿ,ಮಚ್ಚೆಂದ್ರ ಸಾಲ್ಯಾನ್,ಸುರೇಶ್ ಟೈಲರ್,ದುರ್ಗದಾಸ್, ಶಾಂತರಾಮ್,ಅನಂತಕೃಷ್ಣ, ಪ್ರದೀಪ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *