ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ತುಂಬೆ ಪದವಿ ಪೂರ್ವ ಕಾಲೇಜು ಮತ್ತು ರೋಟರಿ ಕ್ಲಬ್ಬಿನ ವತಿಯಿಂದ ಭಾನುವಾರ ನಡೆದ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಎನ್.ಪ್ರಕಾಶ ಕಾರಂತ ಮಾತನಾಡಿದರು. ವಿ.ಸುಬ್ರಹ್ಮಣ್ಯ ಭಟ್, ಉಮೇಶ ಬೋಳಂತೂರು ಮತ್ತಿತರರು ಚಿತ್ರದಲ್ಲಿದ್ದಾರೆ.
28btl-thumbay
‘ಕ್ರೀಡೆಯಿಂದ ಸೌಹಾರ್ದತೆ ಸಾಧ್ಯ’
ಕ್ರೀಡೆ ಎಂಬುದು ಪ್ರತಿಯೊಬ್ಬರಿಗೂ ಶಿಸ್ತುಬದ್ಧ ಜೀವನದ ಜೊತೆಗೆ ಪರಸ್ಪರ ಸೌಹಾರ್ದತೆಗೆ ಪ್ರೇರಣೆ ಮತ್ತು ಸಾಧನಾ ಮನೋಭಾವ ಮೂಡಿಸುತ್ತದೆ ಎಂದು ಬಂಟ್ವಾಳ ರೋಟರಿ ಕ್ಲಬ್ಬಿನ ಅಧ್ಯಕ್ಷ ಎನ್.ಪ್ರಕಾಶ ಕಾರಂತ ಹೇಳಿದ್ದಾರೆ.
ತಾಲ್ಲೂಕಿನ ತುಂಬೆ ಪದವಿ ಪೂರ್ವ ಕಾಲೇಜು ಮತ್ತು ರೋಟರಿ ಕ್ಲಬ್ಬಿನ ವತಿಯಿಂದ ಭಾನುವಾರ ನಡೆದ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಂಟ್ವಾಳ ರೋಟರಿ ಕ್ಲಬ್ ಉಪಾಧ್ಯಕ್ಷ ಕೆ. ಎನ್. ಹೆಗ್ಡೆ ಮತ್ತು ಬಂಟ್ವಾಳ ಕೆಡಿಪಿ ಸದಸ್ಯ ಉಮೇಶ್ ಬೋಳಂತೂರು ಮಾತನಾಡಿ, ಸೋಲು-ಗೆಲುವು ಜೀವನಕ್ಕೆ ಹೊಸ ಚಿತ್ರಣ ನೀಡುತ್ತದೆ ಎಂದರು.
ಮುಖ್ಯಶಿಕ್ಷಕ ಶ್ರೀನಿವಾಸ್ ಕೆದಿಲ, ಕಾಲೇಜಿನ ಆಡಳಿತಾಧಿಕಾರಿ ಕಿಶೋರ್ ಕುಮಾರ್, ಕಛೇರಿ ಅಧೀಕ್ಷಕ ಅಬ್ದುಲ್ ಕಬೀರ್, ದೈಹಿಕ ಶಿಕ್ಷಕಿ ಮೋಲಿ ಎಡ್ನಾ ಗೋನ್ಸಾಲ್ವಿಸ್ ಮತ್ತಿತರರು ಇದ್ದರು. ಉಪನ್ಯಾಸಕ ವಿ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಕಾಲೇಜು ದೈಹಿಕ ಶಿಕ್ಷಣ ನಿದರ್ೇಶಕ ಸಾಯಿರಾಂ ನಾಯಕ್ ವಂದಿಸಿದರು. ದೈಹಿಕ ಶಿಕ್ಷಕ ಜಗದೀಶ್ ರೈ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *