ಬಡಗಬೆಳ್ಳೂರು:ಸಾಮಾಜಿಕ ಜಾಲತಾಣದಲ್ಲಿ ಇಂದಿನ ಯುವ ಜನತೆ ಹೆಚ್ಚಾಗಿ ಕೆಟ್ಟ ವಿಷಯಗಳಿಗೆ ಉಪಯೋಗಿಸುವ ಈ ಕಾಲದಲ್ಲಿ ಸಮಾನ ಮನಸ್ಕ ಯುವಕರು ಸೇರಿ “ದೀನ ಬಂಧು” ಎಂಬ ವಾಟ್ಸಪ್ ಗ್ರೂಪನ್ನು ರಚಿಸಿ ಗ್ರೂಪ್ ನಲ್ಲಿರುವ ಸದಸ್ಯರಿಂದ ಬಂದ ಹಣವನ್ನು ಪ್ರತಿ ತಿಂಗಳು ಕಷ್ಟದಲ್ಲಿರುವ ಒಬ್ಬರನ್ನು ಗುರುತಿಸಿ ಅವರ ಕಷ್ಟಗಳಿಗೆ ಸಹಾಯವನ್ನು ನೀಡುತ್ತಾಬಂದಿರುವ ಈದೀಗ  ಗ್ರೂಪ್‍ನಲ್ಲಿ 200ಕ್ಕೂ ಅಧಿಕ ಮಂದಿ ಪುರುಷ ,ಮಹಿಳೆಯರು ಸೇರಿ ಸದಸ್ಯರಿದ್ದಾರೆ.

ಎರಡನೇ ವರ್ಷಕ್ಕೆ ಪಾದರ್ಪಣೆ ಮಾಡುವ ಸಂದರ್ಭಕ್ಕೆ ಬರೊಬ್ಬರಿ 26 ಕುಟುಂಬಗಳಿಗೆ ಸಹಾಯ ಹಸ್ತ ನೀಡಿದ ಕುಷಿ ದೀನಬಂಧು ಗ್ರೂಪ್ ಸದಸ್ಯರಿಗಿದೆ. ಅಲ್ಲದೇ ಇನ್ನೂ ಮುಂದಕ್ಕೆ 10,000 ಸಾವಿರ ನೀಡುವ ಜೊತೆಗೆ 25 ಕೆಜಿ ಅಕ್ಕಿ ನೀಡುವ ಚಿಂತನೆ ಇದೆ. ಎರಡನೇ ವರ್ಷದ ವಾರ್ಷಿಕೋತ್ಸವ ಅ. 6ರಂದು ಭಾನುವಾರ ಲೋಕ ಕಲ್ಯಾಣಾರ್ಥವಾಗಿ ಹಾಗೂ ಮೃತ್ಯು ಕಂಟಕಗಳ ನಿವಾರಣೆಗಾಗಿ “ಸಾಮೂಹಿಕ ಸಂಜಿವಿನಿ ಮಹಾ ಮೃತ್ಯುಂಜಯ ತ್ರ್ಯಯಂಬಕ ರುದ್ರ ಹೋಮ “ಬಡಗಬೆಳ್ಳೂರು ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ನಡೆಯಲಿದೆ.download

ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರ ಉಪಸ್ಥಿತಯಲ್ಲಿ ಎಡಪದವು ವಿಷ್ಣುಮೂರ್ತಿ ತಂತ್ರಿ ಪೌರೋಹಿತ್ಯದಲ್ಲಿ ನಡೆಯಲಿದೆ. ಲೋಕ ಕಲ್ಯಾಣಾರ್ಥವಾಗಿ ಮೃತ್ಯು ಕಂಟಕಗಳು ನಿವಾರಣೆಯಾಗಲು ಹಮ್ಮಿಕೊಂಡ ಸಾಮೂಹಿಕ ಸಂಜಿವಿನಿ ಮಹಾ ಮೃತ್ಯುಂಜಯ ತ್ರ್ಯಯಂಬಕ ರುದ್ರ ಹೋಮದಲ್ಲಿ ಭಾಗಿಯಾದ ಎಲ್ಲರ ಕಷ್ಟರ್ಕಾಪಣ್ಯಗಳು ದೂರವಾಗಲಿ ಎಂದು  ಆಶಿಸೋಣವೇ.

ದೀನ ಬಂಧು ಗ್ರೂಫ್‌  ಸದಸ್ಯರು ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌  ಅವರಿಗೆ “ಸಾಮೂಹಿಕ ಸಂಜಿವಿನಿ ಮಹಾ ಮೃತ್ಯುಂಜಯ ತ್ರ್ಯಯಂಬಕ ರುದ್ರ ಹೋಮ “ದಲ್ಲಿ ಭಾಗವಹಿಸಲು  ಆಮಂತ್ರಣ ಪತ್ರಿಕೆ  ನೀಡಿದ ಕ್ಷಣ

808f65af-a442-4386-b354-39ecfee33176

By suddi9

Leave a Reply

Your email address will not be published. Required fields are marked *