ಬಂಟ್ವಾಳ: ಅಕ್ರಮ ಮಾರಾಟದ ಉದ್ದೇಶದಿಂದ ಕಳವು ಮಾಡಿ ತಂದು ಕಟ್ಟಿಹಾಕಿದ್ದ 11 ಜಾನುವಾರುಗಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ವಶಪಡಿಸಿ ರಕ್ಷಿಸಿದ ಘಟನೆ ಗುರುವಾರ ನಡೆದಿದೆ. ಖಚಿತ ವರ್ತಮಾನದ ಮೇರೆಗೆಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸೈ ಪ್ರಸನ್ನ ಎಂ.ಎಸ್ ಮತ್ತವರ ಸಿಬ್ಬಂದಿಗಳು ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಎಂಬಲ್ಲಿಗೆ ದಾಳಿ ನಡೆಸಿ ಎಲ್ಲಿಂದಲೋ ಕಳವು ಮಾಡಿ ತಂದು ಇಲ್ಲಿ ಕಟ್ಟಿ ಹಾಕಿರುವ 4 ಹಾಲು ಕೊಡುವಂತ ದನಗಳು, 5 ದನಗಳು ಹಾಗೂ 2 ಹೋರಿ ಕರು ಸೇರಿ ಒಟ್ಟು 11 ಜಾನುವಾರು ಗಳನ್ನು ವಶಪಡಿಸುಕೊಂಡಿದ್ದಾರೆ.

ಸ್ವಾಧೀನ ಪಡಿಸಿರುವ ಜಾನುವಾರುಗಳ ಒಟ್ಟು ಮೌಲ್ಯ 1,01,000 ರೂ ಗಳು ಎಂದು ಅಂದಾಜಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ…
