ಬಂಟ್ವಾಳ : ಬಳ್ಳಾರಿ ಜಿಲ್ಲಾ  ಅಗರಿಬೊಮ್ಮನ ಹಳ್ಳಿ ಮತ್ತು ಹಡಗಲಿ ತಾಲೂಕಿನ ಶಾಲಾ ಉಸ್ತುವಾರಿ ಅಧಿಕಾರಿಗಳ ತಂಡ ಅಜೀಂ ಪ್ರೇಮ್ ಜೀ ಪೌಂಡೇಶನ್  ಸಹಯೋಗದಲ್ಲಿ “ಶೈಕ್ಷಣಿಕ ಕ್ಷೇತ್ರ ಭೇಟಿ ” ಕಾರ್ಯಕ್ರಮದಡಿ ವೀರಕಂಬ ಗ್ರಾಮದ ಮಜಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ  ಶಾಲೆಗೆ ಭೇಟಿ ನೀಡಿದರು.
IMG-20190925-WA0056
ಶಾಲಾ ಮುಖ್ಯಶಿಕ್ಷಕ  ನಾರಾಯಣ ಪೂಜಾರಿ  ಅವರು ನಿಯೋಗಕ್ಕೆ   ಶಾಲಾ ಶೈಕ್ಷಣಿಕ ಹಾಗೂ ಭೌತಿಕ ಮಾಹಿತಿಯನ್ನು ನೀಡಿದರು .ಈ ಸಂದರ್ಭದಲ್ಲಿ ತಮ್ಮ ಶಾಲಾ ಭೇಟಿಯ ಸವಿನೆನಪಿಗಾಗಿ ಶಾಲೆಯ ಔಷಧಿ ವನದಲ್ಲಿ ಔಷಧಿ ಗಿಡವನ್ನು ನೆಟ್ಟು ಶಾಲೆಯ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .   ಬಂಟ್ವಾಳ ತಾಲ್ಲೂಕು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಧಾಕೃಷ್ಣ ಭಟ್, ಶಾಲಾ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಿನ್ನ ಮೈರಾ ,ಹಾಗೂ ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು
Attachments area

 

By Suddi9

Leave a Reply

Your email address will not be published. Required fields are marked *