ಅಮ್ಮುಂಜೆ: ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ವಾರ್ಷಿಕ ಮಹಾಸಭೆಯು ಸೆ.23ರಂದು ಸೋಮವಾರ ಸಂಘದ ವಠಾರದಲ್ಲಿ ನಡೆಯಿತು.ಅಮ್ಮುಂಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ 2018-19 ನೇ ಶಾಲಿನ ಸಭೆಯಲ್ಲಿ ಪಶು ವೈದ್ಯಾಧಿಕಾರಿ ಡಾ.ಚಂದ್ರಶೇಖರ ಭಟ್ ಗುಣಮಟ್ಟದ ಹಾಲಿನ ಬಗ್ಗೆ ಪಶುಗಳಿಗೆ ಗುಣಮಟ್ಟದ ಆಹಾರವನ್ನು ನೀಡುವ ಕುರಿತು ಸದಸ್ಯರಿಗೆ ಮನವರಿಕೆಮಾಡಿದರು.
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸರೋಜಿನಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲಿಸಿದರು .ಕಾರ್ಯದರ್ಶಿ ರಾಮ ಎಲ್ ಮೂಲ್ಯ ಸ್ವಾಗತಿಸಿ ವಂದಿಸಿದರು.ಸಭೆಯಲ್ಲಿ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
