ಕೈಕಂಬ: ಕೊಳತ್ತಮಜಲು ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮದಲ್ಲಿ 165ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯು ಪಂಚಗ್ರಾಮದ ಗುರು ಮಂದಿರದಲ್ಲಿ ಸೆ.22ರಂದು ಭಾನುವಾರ ಪುರೋಹಿತ ಲೋಕೇಶ್ ಶಾಂತಿ ಪೂಜಾ ವಿಧಿವಿದಾನಗಳನ್ನು ನೆರವೇರಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುಜಂಯಂತಿಯ ಪ್ರಯುಕ್ತ ಸೆ.21ರಂದು ಶನಿವಾರ ದಿಂದ ಬಾನಾವಾರ ಬೆಳಗ್ಗೆ 8 ಗಂಟೆಯವರೆಗೆ ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಬಡಗಬೆಳ್ಳೂರು ಪಂಚಗ್ರಾಮದ ಸದಸ್ಯರಿಂದ ಭಜನಾ ಮಂಗಲೋತ್ಸವ ನಡೆಯಿತು. .ಬಿಲ್ಲವ ಸಮಾಜ ಪಂಚಗ್ರಾಮದ ಅಧ್ಯಕ್ಷ ಗಂಗಾಧರ ಪೂಜಾರಿ ಹಾಗೂ ಬಿಲ್ಲವ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಮಹಿಳಾ ಸದಸ್ಯೆಯರು ಉಪಸ್ಥಿತರಿದ್ದರು.


