ಕೈಕಂಬ : ಗಂಜಿಮಠ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇದರ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಗಂಜಿಮಠದಲ್ಲಿರುವ ಸಂಘದ ಸಭಾಗೃಹದಲ್ಲಿ ನಡೆಯಿತು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಮಿತಾ ಹಿಂದಿನ ಮಹಾಸಭೆಯ ನಡಾವಳಿ ಹಾಗೂ 2018-19ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ಸದಸ್ಯರ ಸ್ವಾಗತಿಸಿದ ಸಂಘದ ಅಧ್ಯಕ್ಷ ಎಂ ಲೋಕಯ್ಯ ಕೊಟ್ಟಾರಿ ಬ್ಯಾಂಕಿನ ವತಿಯಿಂದ ನೀಡಬಹುದಾದ ಸಾಲ ಸೌಲಭ್ಯಗಳ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಜಯಾನಂದ ನಾಯ್ಕ್, ನಿರ್ದೇಶಕರಾದ ಶಿವರಾಮ ಕೊಟ್ಟಾರಿ, ಸುರೇಶ್ ಕೆ, ತಮ್ಮಯ್ಯ ಎನ್ ಪೂಜಾರಿ, ಹರಿಣಾಕ್ಷಿ ಭಾಸ್ಕರ್, ರಾಮಪ್ಪ ಗೌಡ, ಶಂಕರ ಶೆಟ್ಟಿ, ಜಾನಪ್ಪ ಗೌಡ ಹಾಗೂ ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ ವಲಯ ಮೇಲ್ವಿಚಾರಕ ಕಿರಣ್ ಕುಮಾರ್ ಉಪಸ್ಥಿತರಿದ್ದರು.

