ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ಪ್ರಸಕ್ತ ವರ್ಷದಲ್ಲಿ 115 ಕೋಟಿ ವ್ಯವಹಾರ ನಡೆಸಿದ್ದು, 43ಲಕ್ಷ ಲಾಭದಲ್ಲಿದೆ , ಸದಸ್ಯರಿಗೆ ಶೇ8 ಡಿವಿಡೆಂಡ್ ನೀಡುವ ಘೋಷಣೆ ಮಾಡಿದ್ದೇವೆ ಎಂದು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಆನಂದ ಅವರು ಹೇಳಿದರು. ಅವರು ಬಿಸಿರೋಡಿನ ಸ್ಪರ್ಶಕಲಾ ಮಂದಿರದಲ್ಲಿ ನಡೆದ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಸಿ ಮಾತನಾಡಿದರು. ಸಂಘ ಒಟ್ಟು 3590 ಸದಸ್ಯರನ್ನು ಹೊಂದಿದ್ದು, 24.60 ಕೋಟಿ ಠೇವಣಿ ಹೊಂದಿದೆ, 21.45 ಕೋಟಿ ಸಾಲ ನೀಡಿದೆ ಎಂದು ಅವರು ಹೇಳಿದರು. ಜನರ ಆಶೋತ್ತರಗಳಿಗೆ ಸ್ಪಂದನೆ ನೀಡಿದ್ದೇವೆ, ಕೃಷಿಪತ್ತಿನ ಸಹಕಾರಿ ಸಂಘವಾದ್ದರಿಂದ ಕೃಷಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂಘ ಸಹಕಾರ ನೀಡಿದೆ.

IMG_7929

ಬಿಸಿರೋಡಿನ ಕೈಕಂಬ ಸ್ವಂತ ಕಟ್ಟಡದ ಉದ್ಘಾಟನೆ ಶೀಘ್ರವಾಗಿ ನಡೆಯಲಿದೆ. ರಾಷ್ಟ್ರೀಯ ಬ್ಯಾಂಕ್ ಗೆ ಸರಿಹೊಂದುವ ರೀತಿಯಲ್ಲಿ ಕಂಪ್ಯೂಟರೀಕೃತ ಸಂಘವಾಗಿ ಬೆಳೆದಿರುವ ಈ ಬ್ಯಾಂಕ್ ಮೂಲಕ ವ್ಯವಹಾರ ಮಾಡುವಂತೆ ವಿನಂತಿಸಿದರು. ಸದಸ್ಯರ ಸಹಕಾರದಿಂದ ಮಾತ್ರ ಯಾವುದೇ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಮಹಾಸಭೆಯಲ್ಲಿ ನಿರ್ದೇಶಕರುಗಳಾದ ಎಮ್.ಕರುಣೇಂದ್ರ ಪೂಜಾರಿ, ಮನೋಹರ ಮೂಲ್ಯ, ಕೆ.ಎನ್.ಶೇಖರ್, ಭವಾನಿಶಂಕರ್ ರಾವ್, ಕೆ.ಪ್ರಕಾಶ್, ಬಿ.ಸದಾಶಿವ ಶೆಣ್ಯೆ, ಎ.ಲಕ್ಷೀ ವಿ.ಪ್ರಭು ಮತ್ತು ಡಿ.ಸಿ.ಸಿ.ಬ್ಯಾಂಕ್ ವಲಯ ಮೇಲ್ವಿಚಾರಕ ಎಚ್.ಕೇಶವ ಕಿಣಿ ಉಪಸ್ಥಿತರಿದ್ದರುಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ಜಯಪ್ರಕಾಶ್ ಕಾಮತ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಅಧ್ಯಕ್ಷ ಜಿ.ಆನಂದ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಮಹಾಬಲ ಶೆಟ್ಟಿ ವಂದಿಸಿದರು

By suddi9

Leave a Reply

Your email address will not be published. Required fields are marked *