ವಿಟ್ಲ : ಅಧ್ಯಾಪಕರ ಸಹಕಾರ ಸಂಘ ವಿಟ್ಲ ಇದರ ವಾರ್ಷಿಕ ಮಹಾ ಸಭೆಯು ವಿಟ್ಲದ ಮಾದರಿ ಶಾಲಾ ಸಭಾ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಹಾಗೂ ಸದ್ಯರ ಮಕ್ಕಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಸಂಘವು ಪ್ರಸಕ್ತ ವರ್ಷ1,49,62,014.47 ರೂ ಲಾಭ ಗಳಿಸಿದ್ದು ಶೇ 15 ಡಿವಿಡೆಂಡ್ ಘೋಷಿಸಲಾಯಿತು.

SHV_2475
ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ಪದ್ಮಾ ಡಿ ಸ.ಹಿ.ಪ್ರಾ ಶಾಲೆ ಅಲೆಟ್ಟಿ ಸುಳ್ಯ ಮತ್ತು ಶೇಖ್ ಆದಂ ಸಾಹೇಬ್ ಸ.ಪ.ಪೂ ಕಾಲೇಜು ವಗ್ಗ, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಾದ ಲೀಲಾವತಿ ಕೆ ಸ.ಹಿ.ಪ್ರಾ ಶಾಲೆ ಪಿಲಿಗೂಡು ಬೆಳ್ತಂಗಡಿ, ಶೋಭಾ ಯು ಸ.ಹಿ,ಪ್ರಾ ಶಾಲೆ ಮಾನಂಪಾಡಿ ಮಂಗಳೂರು, ಸವಿತಾ ಸ.ಕಿ.ಪ್ರಾ ಶಾಲೆ ಕೊಡಿಯಾಲ್‍ಬೈಲ್ ಉಬರಡ್ಕ ಮಿತ್ತೂರು, ದೊಡ್ಡಕೆಂಪಯ್ಯ ಸ.ಹಿ.ಪ್ರಾ ಶಾಲೆ ಅನಂತಾಡಿ ಬಂಟ್ವಾಳ, ಮೋನಪ್ಪ ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಬಂಟ್ವಾಳ, ತಾರಾನಾಥ ಸ.ಪ್ರೌ ಶಾಲೆ ಮಂಚಿ ಬಂಟ್ವಾಳ, ತ್ಯಾಗಂ ಎಂ ಶ್ರೀರಾಮಕೃಷ್ಣ ಅ.ಪ್ರೌ ಶಾಲೆ ಪಾವೂರು ಮಂಗಳೂರು, ಗಣಪತಿ ಎಸ್ ನಾಯ್ಕ ಸ.ಪ್ರೌ ಶಾಲೆ ನೆಲ್ಲಕಾರು ಮೂಡಬಿದ್ರೆ ಮಂಗಳೂರು ಇವರನ್ನು ಸನ್ಮಾನಿಸಲಾಯಿತು.

SHV_2490
ಈ ಕಾರ್ಯಕ್ರಮದಲ್ಲಿ ದ ಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ ಭಟ್, ಬಂಟ್ವಾಳ ಸಹಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ, ಬಂಟ್ವಾಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ರೈ, ದ ಕ ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ನಿಕಟ ಪೂರ್ವ ಅಧ್ಯಕ್ಷರಾಮಕೃಷ್ಣ ಶಿರೂರು ಮತ್ತು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಗೌರವ ಸಲಹೆಗಾರ ಕೆ ರಮೇಶ್ ನಾಯಕ್ ರಾಯಿ, ನಿರ್ಧೇಶಕರುಗಳಾದ ಜೆಸಿಂತಾ ಸೋಫಿಯಾ ಮಸ್ಕರೇನಸ್, ಕುಂಞ ನಾಯ್ಕ, ನವೀನ್, ಕಮಲಾಕ್ಷ, ಜಗನ್ನಾಥ ಎಂ, ಸೇಸಪ್ಪ ಮೂಲ್ಯ, ಚಿತ್ರಕಲಾ, ಸಂಜೀವ ಹೆಚ್, ಬಾಬು ಗೌಡ, ಎನ್ ಆನಂದ, ಸುರೇಶ್ ಕುಮಾರ್ ಮತ್ತು ಪ್ರಭಾಕರ ವೇದಿಕೆಯಲ್ಲಿದ್ದರು. ಸಂಘದ ಅಧ್ಯಕ್ಷ ಮೋನಪ್ಪ ಕೆ ಸ್ವಾಗತಿಸಿ ವರದಿ ವಾಚಿಸಿದರು. ಉಪಾಧ್ಯಕ್ಷ ರಾಜೇಂದ್ರ ರೈ ವಂದಿಸಿದರು.

By suddi9

Leave a Reply

Your email address will not be published. Required fields are marked *